ಮಾಡೂರು: ಎಂವೈಎಫ್ ಸಂಘಟನೆಯ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕ

ಮಾಡೂರು(www.Vknews.in):ದಿನಾಂಕ 1.11.2020 ಅದಿತ್ಯವಾರ ಸಂಜೆ ಸುಮಾರು 3:30 ಗಂಟೆಗೆ ಸರಿಯಾಗಿ ಮಾಡೂರು ಯುವಕರ ಸಮಾಜ ಸೇವಾ ಹಾಗೂ ಧಾರ್ಮಿಕ ಒಗ್ಗಟ್ಟಿನ ಪ್ರತೀಕವಾದ ಎಂ.ವೈ.ಎಪ್.(M.Y.F) ಸಂಘಟನೆಯ ಮಹಾ ಸಭೆಯು ಇಮಾದುದ್ದೀನ್ ಅರಬಿ ಮದರಸದಲ್ಲಿ ನಡೆಯಿತು. ರಿಯಾಜ್ ಕೊಂಡಾಣ ಸ್ವಾಗತ ಭಾಷಣ ಮಾಡಿದ ನಂತರ ನವಾಜ್ ಮಾಡೂರು ಲೆಕ್ಕಾ ಪತ್ರಗಳ ದಂಡನೆಯನ್ನು ಮಾಡಿದರು, ತದ ನಂತರ ಅಧ್ಯಕ್ಷರಾದ ಬಸೀರ್ ಎಂ.ಎ. ಮಾತಾನಾಡಿ ತಾನು ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರ ಎಂ.ವೈ ಎಪ್. ಅಧ್ಯಕ್ಷನಾಗಿ ಮಸೀದಿಯ ಮತ್ತು ಊರಿನ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳ ಮಾಡುತ್ತ ಊರಿನ ಬಡವರ ಮತ್ತು ನೊಂದವರ ಸೇವೆಯಲ್ಲಿ ಮತ್ತು ಮಸೀದಿಯ ಕಾರ್ಯ ಕಲಾಪಗಳಲ್ಲಿ ಊರಿನ ಯುವಶಕ್ತಿಯನ್ನು ಉಪಯೋಗಿಸಿ ಕೊಂಡು ನಮ್ಮೂರ ಒಳಿತಿಗಾಗಿ ಬಹಳಷ್ಟು ದುಡಿದಿದ್ದೇನೆ ಎಂಬ ಹೆಮ್ಮೆ ಇದೆ, ಈಗ ನನಗೆ ವಯಸ್ಸಾಯಿತು ಆರೋಗ್ಯ ಕೂಡ ಕ್ಷೀಣಿಸಿದೆ ಮುಂದಿನ ದಿನಗಳಲ್ಲಿ ಇಂತಹ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ಹೊತ್ತು ಸಂಘಟನೆಯನ್ನು ಮುನ್ನಡೆಸಲು ಯೋಗ್ಯ ಯುವಕರ ನೇತೃತ್ವ ಬಹಳ ಅಗತ್ಯ ಅದ್ದರಿಂದ ನನ್ನ ಅಧ್ಯಕ್ಷ ಸ್ಥಾನಕ್ಕೆ ಈ ಕಮಿಟಿಯ ಬರ್ಕಸ್ಸ್ ಒಂದು ಕಾರಣವಾಗಿ ಮುಂದಿನ ಯುವ ಶಕ್ತಿಯ ನೇತೃತ್ವಕ್ಕೆ ಸಹಕಾರಿಯಾಗಲಿ ಯಾರಾದರೂ ನನ್ನ ಜವಾಬ್ದಾರಿಗೆ ಹೆಗಲು ನೀಡಿ ನನಗೆ ವಿರಮಿಸಲು ಅವಕಾಶ ಮಾಡಿ ಕೊಡ ಬೇಕು ಎಂದು ವಿನಯದಿಂದ ಕೇಳಿ ಕೊಂಡರು ಊರಿನ ಐಕ್ಯತೆ ಮತ್ತು ಸಹಕಾರ ಸಹಾಯ ನಿರಂತರ ಉಳಿಯ ಬೇಕು ಅದಕ್ಕಾಗಿ ಎಲ್ಲರೂ ಒಂದೇ ಬ್ಯಾನರ್ ಎಂ.ವೈ.ಎಪ್ ಅಡಿಯಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ ಬೇಕು,ಆಗ ಮಾತ್ರ ಊರಿನ ಏಳಿಗೆ ಮತ್ತು ಯುವಕರ ಒಗ್ಗಟ್ಟು ಉಳಿಯ ಬಹುದಾಗಿದೆ, ಮಾಡೂರ ಯುವಕರ ನಿತ್ಯ ಚಟುವಟಿಕೆಗಳ ಸಮಾಜಮುಖಿ ಸೇವಾ ಮನೋಭಾವನೆಗಳ ಪಾತ್ರವನ್ನು ಹೊಗಳಿ ತಮ್ಮ ಅಧ್ಯಕ್ಷತೆ ಭಾಷಣದಲ್ಲಿ ಕೊಂಡಾಡಿದರು.

ಆ ಮೇಲೆ ಹಳೇಯ ಕಮಿಟಿಯನ್ನು ನಿರ್ಜೀವ ಗೊಳಿಸಿ ಹೊಸ ಕಮಿಟಿಯನ್ನು ರಚಿಸಲಾಯಿತು, ನೂತನ ಅಧ್ಯಕ್ಷರಾಗಿ ಮತ್ತೇ ಬಸೀರ್ ಎಂ.ಎ ಇವರನ್ನು ಸರ್ವಾನುಮತಗಳಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ (ಅಬ್ಬು) ಕೊಂಡಾಣ ಮತ್ತು ಸೈಯ್ಯದ್ ಉಮರ್ ಕೋಯ ಇವರನ್ನು ಕೂಡ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯ ಕಾರ್ಯದರ್ಶಿಯಾಗಿ ಜನಾಬ್ ರಸೀದ್ ಹಂಝ ಮಾಡೂರು ಮತ್ತು ಇವರ ಜೊತೆ ಕಾರ್ಯದರ್ಶಿಯಾಗಿ ಝಾಹೀದ್ ಮತ್ತು ಇಂತಿಯಾಜ್ ಇವರುಗಳನ್ನು ಆಯ್ಕೆ ಮಾಡಲಾಯಿತು. ಖಜಾಂಜಿಯಾಗಿ ರಿಯಾಜ್ ಕೊಂಡಾಣ ಇವರನ್ನು ಆಯ್ಕೆ ಮಾಡಲಾಯಿತು. ಸಂಘಟನೆಯ ಗೌರವ
ಸಲಹೆಗಾರರಾಗಿ ಜಮಾತಿನ ಹಿರಿಯರಾದ ಜನಾಬ್ ಹಮೀದ್ ಹಸನ್ ಮಾಡೂರು , ಜನಾಬ್ ಅಬ್ಬಾಸ್ ಪಿ.ಎಚ್.ಮಾಡೂರು ಮತ್ತು ಜನಾಬ್ ಅನ್ವರ್ ಸಾಬ್ ಮಾಡೂರು ಇವರನ್ನು ಕೂಡ ಆಯ್ಕೆ ಮಾಡಲಾಯಿತು. ಕೊನೆಯಲಿ ಹಿತನುಡಿಗಳೊಂದಿಗೆ ಸಂಘಟನೆಯ ಕಾರ್ಯಕರ್ತರನ್ನು ಉರಿದುಂಬಿಸಿ ಮಾತಾನಾಡಿದ ಸದ್ರಿ ನಮ್ಮೂರ ಕೌನ್ಸಿಲರ್ ಜನಾಬ್ ಹಮೀದ್ ಹಸನ್ ಮಾಡೂರು ಮಾತಿನುದ್ದಕ್ಕೂ “ನಮ್ಮೂರು ಶಾಂತಿ ಮತ್ತು ಸೌಹಾರ್ಧತೆಯ ಬೀಡಾಗಿದೆ. ಇಲ್ಲಿನ ಯುವಕರ ಸಾಮಾಜಿಕ ಕಳಕಳಿಯು ಎಲ್ಲಡೆಯಲ್ಲೂ ಪ್ರಶಂಸೆಗೆ ಕಾರಣವಾಗಿದೆ, ನಮ್ಮೂರ ಯುವಕರಿಗೆ ಎಲ್ಲ ಊರಿನ ಜಮಾತ್ ಮಟ್ಟದಲ್ಲೂ ಉತ್ತಮ ಹೆಸರು ಇದೆ, ಅದನ್ನು ಉಳಿಸಿ ಕೊಳ್ಳುವ ಪ್ರಯತ್ನವನ್ನು ನೀವು ಮಾಡ ಬೇಕಾಗಿದೆ. ನಮ್ಮೊಳಗಿನ ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳನ್ನು ನಾವೇ ಸೇರಿಕೊಂಡು ಪ್ರೀತಿಯಿಂದ ಬಗೆಹರಿಸ ಬೇಕಾಗಿದೆ, ಅದನ್ನು ಊರ ಹೊರಗೆ ಇತರರಿಗೆ ದೂರು ನೀಡಿ ಅವರ ಮುಂದೆ ನಮ್ಮ ಜಮಾತನ್ನು ಮತ್ತು ಜಮಾತ್ ಕಮಿಟಿಯನ್ನು ಮಾನಹಾನಿ ಮಾಡುವ ಪ್ರಕ್ರಿಯೆ ಸರಿ ಅಲ್ಲ, ಅದು ನಿಮಗೂ ನಮಗೂ ಯಾರಿಗೂ ಶೋಭೆಯನ್ನುಂಟು ಮಾಡಲಾರದು” ಎಂದು ಬಹಳ ಬೇಸರ ಮತ್ತು ವೇದನೆಯಿಂದ ಉಪದೇಶ ನೀಡಿತ್ತ ತಮ್ಮ ಮಾತು ಮುಗಿಸಿದರು. ಕೊನೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸೀರ್ ಎಲ್ಲರ ಸಹಾಯ ಸಹಕಾರ ಖಂಡಿತ ನನಗೆ ಬೇಕಾಗಿದೆ, ಯಾವ ಕಾರಣಕ್ಕೂ ನಾವು ಬೇರ್ಪಟ್ಟು ಜಮಾತಿನ ಮೊಹಲ್ಲಾದ ಶಾಂತಿ ಸೌಹಾರ್ಧತೆ ಮತ್ತು ಸಮಾಜ ಸೇವೆಯಲ್ಲಿ ವಂಚಿತರಾಗ ಬಾರದು ಎಂದು ಹೇಳುತ್ತ ಎಲ್ಲರಿಗೂ ಪ್ರೀತಿಯಿಂದ ವಂದನಾರ್ಪಣೆ ಗೈದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...