ಸೌದಿ ಅರೇಬಿಯಾ(ವಿಶ್ವ ಕನ್ನಡಿಗ ನ್ಯೂಸ್): ಇಲ್ಲಿನ ಖಮೀಸ್ ಮುಶೈತ್ ನಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರು ಮೂಲದ ಸಮೀವುಲ್ಲಾ ಖಾನ್ ಎಂಬವರು ಅ.29ರಂದು ನಿಧನರಾಗಿದ್ದರು. ಈ ವಿಷಯ ತಿಳಿದು ಕೆಸಿಎಫ್ ಖಮೀಸ್ ಮುಶೈತ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಬನ್ನೂರು ರವರು ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಮರಣೋತ್ತರ ಕ್ರಿಯೆಗೆ ಅಗತ್ಯವಿರುವ ಎಲ್ಲಾ ದಾಖಲೆ ಪತ್ರಗಳನ್ನು ಕ್ರೋಢೀಕರಿಸಿ, ಬೇಕಾದ ಕಚೇರಿಗಳಿಗೆ ತಲುಪಿಸಿ ದಫನ ಕಾರ್ಯವನ್ನು ನಡೆಸಲು ಸಿದ್ಧತೆಯನ್ನು ಮಾಡಿದರು.
ನ. 1ರಂದು ಅಸರ್ ನಮಾಜಿನ ಬಳಿಕ ಖಮೀಸ್ ಮುಶೈತ್ ನ ಖಬರಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೆಸಿಎಫ್ನ ಅಬೂಬಕ್ಕರ್ ಪುರಷರಕಟ್ಟೆ, ಖಾಲೀದ್ ಕಬಕ ಸಹಿತ ಹಲವು ಕಾರ್ಯಕರ್ತರು ಹಾಗೂ ಮೃತರ ಕುಟುಂಬಸ್ಥರು ಉಪಸ್ಥಿತರಿದ್ದರು.
ಲಾಕ್ಡೌನ್ ಸಂದರ್ಭಗಳಲ್ಲಿ ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ನ ಅಧ್ಯಕ್ಷ ಅಬ್ದುಲ್ ರಝಾಕ್ ಬನ್ನೂರು ರವರ ನೇತೃತ್ವದಲ್ಲಿ ಹಲವಾರು ವಿಶೇಷ ಸಾಮಾಜಿಕ ಸೇವೆ, ಸಾಂತ್ವನ ಕಾರ್ಯಗಳು ನಡೆಯುತ್ತಲೆ ಬರುತ್ತಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.