ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯನ್ನು ಲಕ್ಷ್ಯವಾಗಿಟ್ಟು ಕಾರ್ಯ ಪ್ರವೃತ್ತವಾಗಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಯ ಮಂಗಳೂರು ತಾಲೂಕು ಸಮಿತಿಯು 2020 ನವೆಂಬರ್ 2 ಸೋಮವಾರ ಅಪರಾಹ್ನ 2.00 ಗಂಟೆ ಗೆ ಅಲ್ ಮದೀನ ಹಾಲ್ ತಿಬ್ಲಪದವು ಹಾಲ್ ನಲ್ಲಿ ಅಸ್ತಿತ್ವಕ್ಕೆ ತರಲಾಗಿದೆ.
ರಾಜ್ಯ ಸಮಿತಿ ಸದಸ್ಯರಾದ ಕೆ ಹೆಚ್ ಇಸ್ಮಾಯಿಲ್ ಸಅದಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಾಜ್ಯ ಉಪಾಧ್ಯಕ್ಷ ಎಚ್ ಐ ಅಬೂಸುಫ್ಯಾನ್ ಇಬ್ರಾಹಿಂ ಮದನಿ ಉದ್ಘಾಟಿಸಿದರು.,ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು, ಕಾರ್ಯದರ್ಶಿ ಸಾದಿಕ್ ಮಾಸ್ಟರ್ ಮಲೆಬೆಟ್ಟು ವಿಷಯ ಮಂಡಿಸಿದರು.ಅಲ್ ಮದೀನಾ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಮಾತನಾಡಿದರು.
ರಾಜ್ಯ ನಾಯಕರಾದ ಹಾಜಿ ಪಿ ಅಬೂಬಕ್ಕರ್ ನೇಜಾರು, ಅಶ್ರಫ್ ಕಿನಾರ, ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ, ಇಸ್ಹಾಖ್ ಝುಹ್ರಿ ದೇರಳಕಟ್ಟೆ, ಮಂಜನಾಡಿ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಮುಹಮ್ಮದ್ ಅಸೈ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಮುಸ್ಲಿಂ ಜಮಾಅತ್ ಉಳ್ಳಾಲ ತಾಲೂಕು ಸಮಿತಿಯ ವಿವರ: ಅಧ್ಯಕ್ಷರು ಹಾಜಿ ಅಲಿ ಕುಂಞಿ ಪಾರೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ
ಉಪಾಧ್ಯಕ್ಷರುಗಳು ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಇಸ್ಮಾಯಿಲ್ ಸಅದಿ ಉರುಮಣೆ, ಅಬ್ದುಲ್ ರಝಾಕ್ ಹಾಜಿ ಆಲಡ್ಕ,ಎನ್ ಎಸ್ ಕರೀಂ ಮಂಜನಾಡಿ, ಮುಹಮ್ಮದ್ ಅಸೈ, ಕಾರ್ಯದರ್ಶಿಗಳು ಕೆ.ಎಮ್.ಕೆ ಮಂಜನಾಡಿ ಮುಹಮ್ಮದ್ ಮದನಿ ಸಾಮಣಿಗೆ, ಕೆ.ಎಮ್.ಮೋನು ಕಲ್ಕಟ್ಟ,ಉಸ್ಮಾನ್ ಕೆ ಸಿ ರೋಡ್,ಅಬ್ದುಲ್ ಲತೀಫ್ ಬೆಳ್ಮ,ಅಬ್ದುಲ್ ಹಮೀದ್ ಮಂಚಿಲ ಸಂಘಟನಾ ಕಾರ್ಯದರ್ಶಿ ಇಸ್ಹಾಖ್ ಝುಹ್ರಿ ದೇರಳಕಟ್ಟೆ,ಕೋ-ಓಡಿನೆಟರ್ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಸದಸ್ಯರುಗಳಾಗಿ ಯು.ಸಿ.ಹಂಝ ಅಜ್ಜಿನಡ್ಕ, ಅಬ್ಬಾಸ್ ತಲಪಾಡಿ,ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಸದ್ದಾಂ ಕಲ್ಲಾಪು, ಫಾರೂಖ್ ಕೋಡಿ, ಏಷ್ಯನ್ ಅಹ್ಮದ್ ಹಾಜಿ, ಬಶೀರ್ ಹಾಜಿ ದೇರಳಕಟ್ಟೆ, ಇಸ್ಮಾಯಿಲ್ ಕಿನ್ಯ, ಕುಂಞಿ ಬಾವು ಹಾಜಿ ಕಲ್ಕಟ್ಟ,ನಾಸಿರ್ ಮಾರ್ಕೆಟ್, ಕಬೀರ್ ಹಾಜಿ ದೇರಳಕಟ್ಟೆ,ಕೆ ಎ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಸಅದಿ ಕಿನ್ಯ, ಮುಹಮ್ಮದ್ ಅಲಿ ಸಖಾಫಿ, ಎಮ್ ಪಿ ಮುಹಮ್ಮದ್ ತಲಪಾಡಿ, ಶರೀಫ್ ದೇರಳಕಟ್ಟೆ ಇವರುಗಳನ್ನು ಆರಿಸಲಾಗಿದೆ.