(ವಿಶ್ವ ಕನ್ನಡಿಗ ನ್ಯೂಸ್ ): ವಿಶ್ವದ ದೊಡ್ಡಣ್ಣನ ಅಧ್ಯಕ್ಷೀಯ ಚುನಾವಣೆ ಕುತೂಹಲ ಕೆರಳಿಸಿದ್ದು, ಜೋ ಬೈಡನ್ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಮುನ್ನಡೆಯಲ್ಲಿ ಸಾಗುತ್ತಿದ್ದಾರೆ.
ಕ್ಷಣಕ್ಷಣಕ್ಕೂ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದು ಇದೆ ಸಂದರ್ಭದಲ್ಲಿ ಟ್ರಂಪ್ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ “ಜೋ ಬೈಡನ್ ಚುನಾವಣೆಯಲ್ಲಿ ಮೋಸ ಮಾಡಿದ್ದಾರೆ,ಇದರಿಂದ ತಾನು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ” ಹೇಳಿದ್ದಾರೆ. ಆದರೆ ಟ್ರಂಪ್ ಯಾವುದೇ ಸಾಕ್ಷಿ ನೀಡದೆ ಈ ಹೇಳಿಕೆ ನೀಡಿದ್ದು ಸೋಲಿನ ಭೀತಿಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಮಾತು ಕೇಳಿ ಬರುತ್ತಿದೆ.
