ಜೆದ್ದಾ(www.Vknews.in): ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಎಸ್ಡಿ) ರಾಷ್ಟ್ರೀಯ ಪರಿವರ್ತನೆ ಕಾರ್ಯಕ್ರಮದ (ಎನ್ಟಿಪಿ) ಅಡಿಯಲ್ಲಿ ಮಹತ್ವದ ಕಾರ್ಮಿಕ ಸುಧಾರಣಾ ಉಪಕ್ರಮವನ್ನು (ಎಲ್ಆರ್ಐ) ಬುಧವಾರ ಪ್ರಾರಂಭಿಸಿತು. ಇದು ಆಕರ್ಷಕ ಉದ್ಯೋಗ ಮಾರುಕಟ್ಟೆಯನ್ನು ಸ್ಥಾಪಿಸುವ, ಕಾರ್ಮಿಕ ಸಾಮರ್ಥ್ಯಗಳನ್ನು ಸಬಲೀಕರಣಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಸಚಿವಾಲಯದ ದೃಷ್ಟಿಕೋನವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಹೊಸ ನೀತಿಯು ಖಾಸಗಿ ವಲಯದ ಎಲ್ಲಾ ವಲಸಿಗ ಕಾರ್ಮಿಕರಿಗೆ ಅನ್ವಯಿಸುತ್ತದೆ.
2021ರ ಮಾರ್ಚ್ ನಿಂದ ಜಾರಿಗೆ ಬರಲಿರುವ ಹೊಸ ಕಾರ್ಮಿಕ ನೀತಿಯ ಪ್ರಕಾರ ವಲಸಿಗ ಕಾರ್ಮಿಕರು ರೀಎಂಟ್ರಿ ಎಕ್ಸಿಟ್ ವೀಸಾ ವಿನಂತಿಯನ್ನು ಸಲ್ಲಿಸಿದ ನಂತರ ತಮ್ಮ ಪ್ರಾಯೋಜಕನ ಅನುಮತಿಯಿಲ್ಲದೆ ಸೌದಿ ಅರೇಬಿಯಾದ ಹೊರಗೆ ಪ್ರಯಾಣಿಸಬಹುದಾಗಿದೆ. ತಮ್ಮ ಕಾರ್ಮಿಕರ ನಿರ್ಗಮನದ ಬಗ್ಗೆ ಉದ್ಯೋಗದಾತರಿಗೆ ವಿದ್ಯುನ್ಮಾನವಾಗಿ ಸೂಚಿಸಲಾಗುತ್ತದೆ. ಅದಲ್ಲದೇ ಪ್ರಾಯೇಜಕನ ಅನುಮತಿಯಿಲ್ಲದೇ ಕಾರ್ಮಿಕರು ತಮ್ಮ ಉದ್ಯೋಗವನ್ನು ಬದಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಸೌದಿ ಕಾರ್ಮಿಕ ಸತಿವಾಲಯವು ಮುಂದೆ ಪ್ರಕಟಿಸಲಿದೆ.