ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ಸೀರತ್ ಅಭಿಯಾನದ ಅಂಗವಾಗಿ ಸರ್ವ ಧರ್ಮೀಯರಿಗೆ ಪ್ರಬಂಧ ಸ್ಪರ್ಧೆ


ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ರಾಜ್ಯವ್ಯಾಪಿಯಾಗಿ ಆಚರಿಸಲ್ಪಡುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಈ ಕೆಳಗಿನ ವಿಭಾಗದವರಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ತಲಾ 15 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ಪ್ರಥಮ), 10 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ದ್ವಿತೀಯ), 5 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ (ತೃತೀಯ) ಬಹುಮಾನವಾಗಿ ನೀಡಲಾಗುವುದು. ಅಲ್ಲದೇ, ತೀರ್ಪುಗಾರರ ಮೆಚ್ಚುಗೆ ಪಡೆದ ಇತರ ಪ್ರಬಂಧಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಗುವುದು.

ವಿಭಾಗ-1: ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ
ವಿಷಯ: ‘ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್(ಸ)ರ ಕೊಡುಗೆ’

ವಿಭಾಗ-2: ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ
ವಿಷಯ: ‘ಪ್ರವಾದಿ ಮುಹಮ್ಮದ್(ಸ)ರ ಸಾಮಾಜಿಕ ನ್ಯಾಯದ ಪರಿಕಲ್ಪನೆ’

ವಿಭಾಗ-3: ಶಿಕ್ಷಕರು ಹಾಗೂ D.Ed. / B.Ed. / M.Ed. ವಿದ್ಯಾರ್ಥಿಗಳಿಗೆ
ವಿಷಯ: ‘ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್(ಸ)ರ ಕೊಡುಗೆ’


ಆಸಕ್ತರು ತಮ್ಮ ಬರಹಗಳನ್ನು ಫುಲ್‍ ಸ್ಕೇಪ್ ಬಿಳಿಹಾಳೆಯ ಒಂದೇ ಮಗ್ಗುಲಲ್ಲಿ 8 ಪುಟಗಳಿಗೆ ಮೀರದಂತೆ ತಮ್ಮ ಅಧಿಕೃತ ದಾಖಲೆಗಳ ಪ್ರತಿಗಳೊಂದಿಗೆ ವಿಭಾಗವನ್ನು ನಮೂದಿಸಿ ಭಾವಚಿತ್ರದೊಂದಿಗೆ 2020 ಡಿಸೆಂಬರ್ 10ರೊಳಗೆ ಪ್ರಬಂಧ ಸ್ಪರ್ಧಾ ಸಮಿತಿ, ಪ್ರವಾದಿ ಮುಹಮ್ಮದ್(ಸ) ಸೀರತ್ ಅಭಿಯಾನ-2020, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು-575001 ವಿಳಾಸದಲ್ಲಿ ಕಳುಹಿಸಿ ಕೊಡಬೇಕು.

ಪ್ರಬಂಧ ಸ್ಪರ್ಧೆಯಲ್ಲಿ ಸರ್ವಧರ್ಮೀಯರಿಗೂ ಭಾಗವಹಿಸಲು ಮುಕ್ತ ಅವಕಾಶವಿದ್ದು, ಸ್ಪರ್ಧಾ ನಿಯಮಗಳ ಹೆಚ್ಚಿನ ಮಾಹಿತಿಗಳಿಗಾಗಿ (9448122361, 9845665198, (0824) 2422786) ಸಂಪರ್ಕಿಸಬೇಕೆಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ಕಾರ್ಯದರ್ಶಿ
ಜಮಾಅತೆ ಇಸ್ಲಾಮೀ ಹಿಂದ್
ಮಂಗಳೂರು ವಲಯ
9448300859

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...