ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಕನ್ನಡ ಭಾಷಣ ಸ್ಪರ್ಧೆ – ಲಿಬಾ‌‌ ಆಯಿಷಾ ಪ್ರಥಮ, ಮುಹಮ್ಮದ್ ಅನಸ್ ದ್ವಿತೀಯ, ಶಬೀಬ್ ಅಹಮ್ಮದ್ ತೃತೀಯ

ಈಶ್ವರಮಂಗಲ (ವಿಶ್ವ ಕನ್ನಡಿಗ ನ್ಯೂಸ್) : ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ಮೇನಾಲ ದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಆನ್ಲೈನ್ ಕನ್ನಡ ಭಾಷಣ ಸ್ಪರ್ಧೆ ನಡೆಯಿತು.

ಪ್ರಥಮ ಸ್ಥಾನವನ್ನು ಅಬ್ದುಲ್ ಲತೀಫ್- ಫಾತಿಮತ್ ಬುಶ್ರಾ ಬೆಳ್ಳಿಚೆಡವು ದಂಪತಿಗಳ ಪುತ್ರಿ ಲಿಬಾ‌‌ ಆಯಿಷಾ (೪ನೇ ತರಗತಿ) ಪಡೆದುಕೊಂಡರು.

ದ್ವಿತೀಯ ಸ್ಥಾನವನ್ನು ಅಬ್ದುಲ್ ಹಮೀದ್ ಸಿ.ಹೆಚ್ ಕಾವು- ಖದೀಜತ್ ನುಸ್ರಾ ದಂಪತಿಗಳ ಪುತ್ರ ಮುಹಮ್ಮದ್ ಅನಸ್ (೩ನೇ ತರಗತಿ) ಪಡೆದುಕೊಂಡರು.

ತೃತೀಯ ಸ್ಥಾನವನ್ನು ಅಬ್ದುಲ್ಲ ಬಡಗನ್ನೂರು- ಸುಮಯ್ಯಾ ದಂಪತಿಗಳ ಪುತ್ರ ಶಬೀಬ್ ಅಹಮ್ಮದ್ ಎಂ.ಎ (೧ ನೇ ತರಗತಿ) ಹಾಗೂ ಪ್ರೋತ್ಸಾಹಕರ ಬಹುಮಾನವನ್ನು ಮುನೀರ್- ಕೈರುನ್ನೀಸಾ ಮೇನಾಲ ದಂಪತಿಗಳ ಪುತ್ರಿ ಫಾತಿಮತ್ ಮುನಾ ಕೆ.ಎಂ (೫ನೇ ತರಗತಿ) ಪಡೆದುಕೊಂಡರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...