ಸಾಮಾಜಿಕ ಜವಾಬ್ಧಾರಿಗೆ ಹೆಚ್ಚು ಮಹತ್ವ ಕಲ್ಪಿಸಿದ್ದೇ ಪ್ರವಾದಿಗಳ ಹೆಗ್ಗಳಿಕೆ

ಮುಲ್ಕಿ (www.vknews.com) ; ರಾಜ್ಯ ಪೈಝಿ ಉಲಮಾಗಳ ಒಕ್ಕೂಟ ರಾಜ್ಯಾದ್ಯಂತ ಹಮ್ಮಿ ಕೊಂಡಿರುವ ರಬೀಅ್ ಕ್ಯಾಂಪೈನ್ ಭಾಗವಾಗಿ ಇತಿಹಾಸ ಪ್ರಸಿದ್ದ ಮುಲ್ಕಿ ಜುಮಾ ಮಸೀದಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಎಸ್ ಬಿ ದಾರಿಮಿ ಉದ್ಘಾಟಿಸಿದರು.

ಮಾನವರು ತಮ್ಮ ವೈಕ್ತಿಕ ಜವಾಬ್ಧಾರಿಯನ್ನು ಯಾರದೇ ಬೋಧನೆಯ ಅಗತ್ಯ ಇಲ್ಲದೆಯೇ ನಿರ್ವಹಿಸುತ್ತಿದ್ದಾರೆ.ಆದರೆ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಹಿಂದೇಟು ಹಾಕುತ್ತಿದ್ದರೆ.ಪ್ರವಾದಿ ಸ ಅ ರ ಹೆಚ್ವಿನ ಬೊಧನೆಗಳು ಸಾಮಾಜಿಕ ಜವಾಬ್ಧಾರಿಯನ್ನು ನೆನಪಿಸುವಂತದ್ದು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಮುಖ್ಯ ಭಾಷಣ ಮಾಡಿದ ಮೌಲಾನ ಚೊಕ್ಕಬೆಟ್ಟು ದಾರಿಮಿ ಜಗತ್ತಿಗೆ ನನ್ನನ್ನು ಅಧ್ಯಾಪಕ ನನ್ನಾಗಿ ಕಳುಹಿಸಲಾಗಿದೆ ಎಂದು ಪ್ರವಾದಿಯವರು ಹೇಳಿರುತ್ತಾರೆ. ಮಾನವ ಬದುಕನ್ನು ಸರಳವಾಗಿ ಕಲಿಸಿ ಕೊಟ್ಟ ಪ್ರವಾದಿಗಳು,ಸಂಕಷ್ಟದ ಸಮಯ ಸಹಾಯ ಮಾಡುತ್ತಾ,ದ್ವೇಷ ತೋರಿವರೊಂದಿಗೆ ಪ್ರೀತಿ ತೋರುತ್ತಾ, ತಪ್ಪು ಮಾಡಿದವರಿಗೆ ಕ್ಷಮೆ ಕೊಟ್ಟು ,ಕೊಲ್ಲಲು ಬಂದವರಿಗೆ ಕರುಣೆಯಿಂದ ವರ್ತಿಸುವ ಮೂಲಕ ಇಸ್ಲಾಮಿನ ಸಂದೇಶಗಳನ್ನು ಜಗದೆಲ್ಲೆಡೆ ಹರಡಿದರು. ಇಂತಹ ಮಾದರಿಯ ಮೂಲಕ ಪ್ರವಾದಿ ಮುಹಮ್ಮದ್ ಸ ರವರ ಸಂದೇಶಗಳನ್ನು ಪ್ರಸ್ತುತ ಪಡಿಸುವುದು ಕಾಲದ ಬೇಡಿಕೆ ಎಂದು ಅಭಿಪ್ರಾಯ ಪಟ್ಟರು.

ಪೈಝೀಸ್ ರಾಜ್ಯ ಘಟಕದ ಕೋಶಾಧಿಕಾರಿ ಕನ್ಯಾನ ಸುಲೈಮಾನ್ ಪೈಝಿ ಅದ್ಯಕ್ಷತೆ ವಹಸಿ ಮಾತನಾಡಿ ಪ್ರವಾದಿಗಳ ಕೀರ್ತನೆಯಿಂದ ಅವರ ಬಗ್ಗೆ ನಮಗೆ ಪ್ರೀತಿ ಹೆಚ್ಚಾಗಿ ಅವರನ್ನು ಅನುಕರಿಸಲು ಸಹಾಯಕವಾಗುತ್ತದೆ ಎಂದರು.

ಪಲಿಮಾರ್ ಪೈಝಿ ,ಮಜೀದ್ ಪೈಝಿ ನಂದಾವರ,ಶಬೀರ್ ಪೈಝಿ ಎರ್ಮಾಲ್ ಮೊದಲಾದವರು ಮಾತನಾಡಿದರು, ರಿಯಾಝ್ ಫೈಝಿ , ಶೌಕತ್ ಫೈಝಿ ಕಣಿಯೂರು, ಏಕೆ ಅಬ್ದುಲ್ ಖಾದರ್ ಹಾಜಿ,ಇಬ್ರಾಹಿಂ ಬೊಳ್ಳೂರು, ಮುಹಮ್ಮದ್ ಹುಸೈನ್ ಮುಲ್ಕಿ,ಶರೀಪ್ ಇಮ್ದಾದಿ,ಶಾಪಿ ಮುಸ್ಲಿಯಾರ್ ಕಾರ್ನಾಡ್ ಅಝೀಝ್ iak ಅಬ್ದುಲ್ ಖಾದರ್ ಇಂದಿರಾನಗರ ಮೊದಲಾದವರು ಉಪಸ್ಥಿತರಿದ್ದರು.

ತೈಯ್ಯಿಬ್ ಪೈಝಿ ಬೊಳ್ಳೂರು ಸ್ವಾಗತಿಸಿದರು,ಸಿರಾಜ್ ಪೈಝಿ ಚಾರ್ಮಾಡಿ ವಂದಿಸಿದರು.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...