ಸೌದಿ ಅರೇಬಿಯಾ: ತಾಯ್ನಾಡಿನಲ್ಲಿ ಸಿಲುಕಿರುವ ಭಾರತೀಯರ ಪ್ರವೇಶ ಅನುಮತಿ ಕುರಿತು ಪರಿಶೀಲನೆ

ಜೆದ್ದಾ(www.vknews.in): ರಜೆ ನಿಮಿತ್ತ ತಾಯ್ನಾಡಿಗೆ ತೆರಳಿ ಸೌದಿ ಅರೇಬಿಯಾಕ್ಕೆ ಹಿಂದಿರುಗಲಾರದೇ ಸಿಲುಕಿಕೊಂಡಿರುವ ಲಕ್ಷಾಂತರ ಭಾರತೀಯ ಕಾರ್ಮಿಕರಿಗೆ ರಾಷ್ಟ್ರಕ್ಕೆ ಹಿಂದಿರುಗಲು ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಹಾಗೂ ಭಾರತೀಯರಿಗೆ ಉಮ್ರಾ ನೆರವೇರಿಸಲು ಅವಕಾಶ ಕಲ್ಪಿಸಿ ಕೊಡುವಂತೆ ಭಾರತದ ರಾಯಭಾರಿ ಕಚೇರಿ ಅಧಿಕಾರಿಗಳು ಸೌದಿ ಸರಕಾರವನ್ನು ಆಗ್ರಹಿಸಿದ್ದಾರೆ.

ಭಾರತದ ರಾಯಭಾರಿಗಳ ಕೋರಿಕೆಯನ್ನು ಪರಿಶೀಲಿಸಿದ ಸೌದಿ ಸರಕಾರವು ಈ ಕುರಿತು ಶೀಘ್ರವೇ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಸ್ಪಷ್ಟಪಡಿಸಿದೆ. ಕೊವಿಡ್ ಲಾಕ್ ಡೌನ್ ಕಾರಣದಿಂದಾಗಿ ರಜೆಯಲ್ಲಿ ತಾಯ್ನಾಡಿಗೆ ತೆರಳಿದ ಲಕ್ಷಾಂತರ ಭಾರತೀಯರು ಸೌದಿ ಅರೇಬಿಯಾಕ್ಕೆ ಹಿಂದಿರುಗಲಾರದೆ ಸಿಲುಕಿಕೊಂಡಿದ್ದು, ಇವರಲ್ಲಿ ಹಲವರ ರಜಾ ಕಾಲಾವಧಿ ಮೀರಿದ್ಗು, ಇನ್ನೂ ಹಲವರ ಇಖಾಮವು ಅವಧಿ ಮೀರಿದೆ. ಈ ಎಲ್ಲಾ ನೌಕರರ ವೀಸಾಗಳನ್ನು ಸರಿಪಡಿಸಿ ಅವರಿಗೆ ರಾಷ್ಟ್ರಕ್ಕೆ ಹಿಂದಿರುಗಳು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗುವುದೆಂದು ಸೌದಿ ಪಾಸ್ಪೋರ್ಟ್ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...