ಮಹಿಳಾ ಟಿ-20 ಚಾಲೆಂಜ್ : ಟ್ರೈಲ್ ಬ್ಲೇಜರ್ಸ್ ತಂಡವನ್ನು ಚಾಂಪಿಯನ್ ಪಟ್ಟವೇರಿಸಿದ ನಾಯಕಿ ಸ್ಮೃತಿ ಮಂದನಾ

(ವಿಶ್ವ ಕನ್ನಡಿಗ ನ್ಯೂಸ್ ):ದುಬೈ ನಲ್ಲಿ ನಡೆದ ಮಹಿಳಾ ಟಿ 20 ಚಾಲೆಂಜ್ ಪಂದ್ಯಾವಳಿಯಲ್ಲಿ ಸ್ಮೃತಿ ಮಂದನಾ ನಾಯಕತ್ವದ ಟ್ರೈಲ್ ಬ್ಲೇಜರ್ಸ್ ತಂಡ ಸೂಪರ್ ನೋವಾಸ್ ತಂಡವನ್ನು 16 ರನ್ ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟವೇರಿದೆ.
ಮೊದಲು ಬ್ಯಾಟಿಂಗ್ ನಡೆಸಿದ
ಟ್ರೈಲ್ ಬ್ಲೇಜರ್ಸ್ ತಂಡ ನಾಯಕಿ ಸ್ಮೃತಿ ಮಂದನಾ ಆಕರ್ಷಕ 68 ರನ್ ಗಳ ನೆರವಿನಿಂದ 118 ರನ್ ಗಳಿಸಿತು. ಸೂಪರ್ ನೋವಾಸ್ ತಂಡದ ರಾಧಾ ಯಾದವ್ 5 ವಿಕೆಟ್ ಪಡೆದುಕೊಂಡರು. ಈ ಸಾಮಾನ್ಯ ಮೊತ್ತವನ್ನು ಬೆನ್ನಟ್ಟಿದ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಸೂಪರ್ ನೋವಾಸ್ 102 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕಿ ಹರ್ಮನ್ 30ರನ್ ಗಳಿಸಿದರೆ,ಬಾಂಗ್ಲಾ ಬೌಲರ್ ಸಲ್ಮಾ ಮೂರು ವಿಕೆಟ್ ಪಡೆದು ಮಿಂಚಿದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...