ಹೃದಯವಿದೆಯಾ ? ಸತ್ಯದ ಧ್ವನಿಯಾಗಲು – ಲೇಖನ

(ವಿಶ್ವ ಕನ್ನಡಿಗ ನ್ಯೂಸ್): SSF ಇದು ಧರ್ಮಜಾಗೃತಿಯ ಧ್ವನಿ, ಅರಾಜಕತೆಯ ವಿರುದ್ಧ ಸಮರ ಸಾರುವ ಧ್ವನಿ, ಇಸ್ಲಾಮಿನ ನೈಜ ಆದರ್ಶಗಳನ್ನು ಬಿತ್ತರಿಸಿ , ಸುನ್ನಿ ಜನಸಮೂಹವನ್ನು ಧಾರ್ಮಿಕ‌ ಚೌಕಟ್ಟಿನಲ್ಲಿ ಮುನ್ನಡೆಯಲು ಅನುವು ಮಾಡುವಲ್ಲಿ ಸಫಲವಾದ ಸಂಘಟನೆ ಅದು SSF ಮಾತ್ರವಾಗಿದೆ.

SSF ಇಷ್ಟು ವರ್ಷಗಳಲ್ಲಿ ಏನು ಮಾಡಿದೆ ಎಂಬ ಪ್ರಶ್ನೆ ಮುಂದಿಡುವ ಬದಲು, ಏನು ಮಾಡಲು ಬಾಕಿ‌ ಇದೆ‌ ಎನ್ನುವ ಪ್ರಶ್ನೆ ಸೂಕ್ತ.

ಕಾರಣ ಪ್ರತಿಯೊಂದು ಸನ್ನಿವೇಶಕ್ಕನುಗುಣವಾಗಿ SSF ಮಾಡಿಕೊಂಡು ಬಂದಂತಹಾ ಸೇವೆ ,ತ್ಯಾಗ ಎಲ್ಲವೂ ಗಮನಾರ್ಹವಾಗಿದೆ.

SSF ನಿಂದ‌ ನಮಗೆ ಸಿಗುವ ಫಲವಾದರೂ ಏನು ಎಂಬ ಕೆಲವರ ಮನಗಳಲ್ಲಿ ಮೂಡಿರುವ ಪ್ರಶ್ನೆಗೆ‌ ತಕ್ಕ ಉತ್ತರ‌ ಮೊನ್ನೆ ತಾನೇ ಬೈಕ್ ಅಪಘಾತದಲ್ಲಿ ನಮ್ಮನ್ನಗಲಿದ ಮರ್ಹೂಂ ಆರಿಫ್ ತುಂಬೆದಡ್ಕ.

ಆರಿಫ್ ಒಬ್ಬ ಏನು ಉಸ್ತಾದ್ ಅಲ್ಲ ,‌ ಸೈಯ್ಯಿದ್ ಪರಂಪರೆಯಲ್ಲಿ ಹುಟ್ಟಿಲ್ಲ, SSF ನಲ್ಲಿ ಗುರುತಿಸಿಕೊಳ್ಳುವಂತಹಾ ಸ್ಥಾನದಲ್ಲಿಯೂ ಇರಲಿಲ್ಲ ,‌ ಬದಲಾಗಿ ಕೇವಲ‌ ನಿಷ್ಠಾವಂತ ಕಾರ್ಯಕರ್ತ ಅಷ್ಟೆ‌.ಕೊನೆಯ ವಿದಾಯಕ್ಕೆ ಅವನ‌ ಮನೆ ಅಂಗಳದಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ. ಆರಿಫ್‌ಗಾಗಿ ಮಿಡಿದ ಹೃದಯಗಳೆಷ್ಟು! ಅವನ ಪಾರತ್ರಿಕ ಮೋಕ್ಷಕ್ಕಾಗಿ ಯಾಸೀನ್‌ ತಹ್ಲೀಲ್ ಓದಿ ಹದ್ಯಾಮಾಡಿದವರೆಷ್ಟು!

ಅದಲ್ಲದೇ ಸಂಘಟನಾ ನಾಯಕರು ಮನೆಗೆ ಭೇಟಿ ನೀಡಿ ಪ್ರಾರ್ಥನಾ ಕೂಟ ಸಾಂತ್ವನದ ನುಡಿಮಾತುಗಳು.
ಇಷ್ಟು ಸಾಕಲ್ಲದೇ ಮತ್ತೇನು ಬೇಕು ನಮಗೆ …
ನಿಜವಾಗಿಯೂ SSF ಗೆ ನಮ್ಮ‌ ಅಗತ್ಯವಿಲ್ಲ, ಬದಲಾಗಿ‌ ನಮಗೆ SSF ಅಗತ್ಯವಿದೆ.

ನಾಳೆ ಖಬರಿನಲ್ಲಿ ಏಕಾಂತವಾಗಿರುವಾಗ ತಮಗಾಗಿ ಯಾವುದೋ ಮೂಲೆಯಲ್ಲಿ ತಹ್ಲೀಲ್ ಓದಿ ಹದ್ಯಾಮಾಡುವ ಸಂಘಟನೆ.
ವಡಗರ ಮುಹಮ್ಮದ್ ಹಾಜಿ ತಾಜುಲ್ ಉಲಮಾ, ಖಮರುಲ್‌ ಉಲಮಾ ರಂತಹಾ ಅಹ್ಲುಸ್ಸುನ್ನದ ಪಂಡಿತ ಶಿರೋಮಣಿಗಳು ಕಟ್ಟಿ ಬೆಳೆಸಿದಂತಹಾ ಸಂಘಟನೆ,‌‌ ರಾಜಕೀಯದ ಕೈಗೊಂಬೆಯಾಗದೇ ಇಸ್ಲಾಮಿನ ಚೌಕಟ್ಟಿನಲ್ಲಿ ಮುನ್ನಡೆಯುವ ಕರ್ನಾಟಕದ ಏಕೈಕ ಸಂಘ ಕುಟುಂಬ ಅದು SSF ಮಾತ್ರವಾಗಿದೆ.

ಇಂತಹ ಅತ್ಯಮೂಲ್ಯ ಸಂಘಟನೆಯ ಸದಸ್ಯತನ ಅಭಿಯಾನ ನ.13- 30 ರ ವರೆಗೆ ನಡೆಯಲಿದೆ. ಕಾರ್ಯಕರ್ತರೆಲ್ಲರೂ ಸಹಕರಿಸುವಿರೆಂಬ ಪೂರ್ಣ ಭರವಸೆಯೊಂದಿಗೆ..

– ನೌಶಾ ಪಿ., ಉರುವಾಲು ಪದವು

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...