ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾ ಕುವೈತ್ ರವರ ಸ್ಮರಣಾರ್ಥ ಗುರುಪುರ ಕೈಕಂಬದಲ್ಲಿ ಯಶಸ್ವಿ ಸಾರ್ವಜನಿಕ ರಕ್ತದಾನ ಶಿಬಿರ.

ಮಂಗಳೂರು, ಗುರುಪುರ-ಕೈಕಂಬ (www.vknews.com) : ನವೆಂಬರ್ 8:ಗ್ರೀನ್ ಹ್ಯಾಂಡ್ಸ್ ಎನ್ವಿರಾನ್ಮೆಂಟಲ್ ಟೀಮ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಜಂಟಿ ಆಶ್ರಯದಲ್ಲಿ ತೇಜಶ್ವಿನಿ ಲಯನ್ಸ್ ಬ್ಲಡ್ ಬ್ಯಾಂಕ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಶೇಖ್ ಸಬಾ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾ ಕುವೈತ್ ರವರ ಸ್ಮರಣಾರ್ಥ ದಿನಾಂಕ 08/11/2020 ಭಾನುವಾರದಂದು ಗುರುಪುರ ಕೈಕಂಬದ ನವಮಿ ಸೂಪರ್ ಮಾರ್ಕೆಟ್ ಮುಂಭಾಗದಲ್ಲಿ “ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ” ಹಾಗೂ ಸನ್ಮಾನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಜನಾಬ್: ಮುಹಮ್ಮದ್ ಆಸೀಫ್ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು AH ನೌಷಾದ್ ಹಾಜಿ ಸುರಲ್ಪಾಡಿ ಉದ್ಘಾಟಿಸಿ ಬಹುಮಾನ್ಯ ಅಬೂ ಝೈದ್ ಶಾಫಿ ಮದನಿ ಕರಾಯ ದುವಾ ಆಶಿರ್ವಚನಗೈದರು.

ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣವನ್ನು ನೀಡುತ್ತಾ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕೃತ ಆದರ್ಶ್ ವಿದ್ಯಾಸಂಸ್ಥೆ ತೋಡಾರು ಮತ್ತು ಅಲ್ ಬಿರ್ರ್ ಪ್ರಿ ಇಸ್ಲಾಮಿಕ್ ಸ್ಕೂಲ್ ಗುರುಪುರ ಕೈಕಂಬ ಇದರ ಅಧ್ಯಕ್ಷರಾಗಿರುವ ಜನಾಬ್ ಮುಹಮ್ಮದ್ ಆಸೀಫ್ ಸೂರಲ್ಪಾಡಿ ಹಾಗೂ ದ.ಕ ಜಿಲ್ಲೆಯ ಅದೆಷ್ಟೋ ಸಹೋದರಿಯರಿಗೆ ದಾಂಪತ್ಯ ಜೀವನವೆಂಬ ಭಾಗ್ಯವನ್ನು ಕಲ್ಪಿಸಿ “ಮೈ ಸಿಸ್ಟರ್ ಅಭಿಯಾನದ” ಮೂಲಕ ಹಲವಾರು ಬಡ ಅಸಹಾಯಕ ಸಹೋದರಿಯರ ಮುಖದಲ್ಲಿ ಮಂದಹಾಸದ ನಗೆಯನ್ನು ಬೀರಲು ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಅದೆಷ್ಟೋ ಬಡವರಿಗೆ ಸಹಾಯ ಹಸ್ತ ನೀಡಿದ ಸಲುವಾಗಿ ಅಧ್ಯಕ್ಷರಾದ ಜನಾಬ್ ಎ.ಎಚ್ ನೌಷಾದ್ ಹಾಜಿ ಸೂರಲ್ಪಾಡಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಶಿಬಿರದಲ್ಲಿ 30 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ U.P. ಇಬ್ರಾಹಿಂ ಅಡ್ಡೂರು, ಶೇಖ್ ಇಬ್ರಾಹಿಂ ಸುಳ್ಯ, ಆಸೀಫ್ ಕೋಟೆಬಾಗಿಲು, ಉಸ್ಮಾನ್ ಗುರುಪುರ,A.K.ಆರಿಸ್ ಅಡ್ಡೂರು,R.S.ಝಾಕಿರ್ ಸುರಲ್ಪಾಡಿ,N.H.ಫಯಾಝ್ ಗಂಜಿಮಠ,ಸಾಬಿಕ್ ಅಡ್ಡೂರು,Dr.E.K.A.ಸಿದ್ದೀಕ್ ಅಡ್ಡೂರು, ಎಂ. ಶರೀಫ್ ಅಡ್ಡೂರು, ಜಿ.ಎಂ.ಇಂತಿಯಾಝ್ ಗಂಜಿಮಠ, ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು. ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಗುರುಪುರ ಕೈಕಂಬದ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...