ಜಗಳೂರಿನಲ್ಲಿ ಕೆಸಿಎಫ್ ಒಮಾನ್ “ಮಾಝಿನ್ ಹೆರಿಟೇಜ್” ಇಹ್ಸಾನ್ ಸೆಂಟರಿಗೆ ಶಿಲನ್ಯಾಸ

ಜಗಳೂರು(ವಿಶ್ವಕನ್ನಡಿಗ ನ್ಯೂಸ್): ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕ ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ ಒಮಾನಿನಲ್ಲಿ ಅಂತ್ಯ ವಿಶ್ರಮ ಗೊಳ್ಳುತ್ತಿರು ಸ್ವಹಾಬಿ ಮಾಝಿನ್ ಇಬ್ನ್ ಗಲೂಬ (ರ.ಅ) ರವರ ಹೆಸರಿನಲ್ಲಿ ನಿರ್ಮಿಸುತ್ತಿರುವ ಮಾಝಿನ್ ಹೆರಿಟೇಜ್ ಇಹ್ಸಾನ್ ಸೆಂಟರ್ ಜಗಳೂರು ಇದರ ಶಿಲಾನ್ಯಾಸ ಕಾರ್ಯಕ್ರಮವು ಇಂದು ಅಸ್ಸಯ್ಯಿದ್ ಅಬೂಬಕರ್ ಸಿದ್ದೀಕ್ ತಂಙಳ್ ಅಲ್ ಹಾದಿ ತೀರ್ಥಹಳ್ಳಿ ಇವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಕಳೆದ ಏಳು ವರ್ಷಗಳಿಂದ ಅಹ್ಲುಸುನ್ನತ್ ವಲ್ ಜಮಾಅತ್ ನ ಏಳಿಗೆಗೆ ಹಾಗೂ ತನ್ನ ನಾಡಿನ ಅಭ್ಯುದಯಕ್ಕೆ ಶ್ರಮಿಸುತ್ತಿದೆ.ಕಳೆದ ಕೆಲವು ವರ್ಷಗಳಿಂದ ತನ್ನ ನಾಡಿಗೆ ಉಪಯುಕ್ತವಾದ ಹಲವಾರು ಕಾರ್ಯಕ್ರಮಗಳನ್ನು ಸಮರ್ಪಿಸಿ ಇದೀಗ ತನ್ನ ಸ್ವಂತ ಸ್ಥಾಪನೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ದಾವಣಗೆರೆ ಜಗಳೂರಿನಲ್ಲಿ ಸ್ಥಳವನ್ನು ಖರೀದಿಸಿ ಆ ಸ್ಥಳದಲ್ಲಿ ಮದರಸ ಕಟ್ಟಡ ನಿರ್ಮಿಸುವ ಸಲುವಾಗಿ ಇಂದು ಶಿಲಾನ್ಯಾಸ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸ ಅದಿ , ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರ್, ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ, ಕೆಸಿಎಫ್ ಒಮಾನ್ ನಿಝ್ವ ಝೋನ್ ಅಧ್ಯಕ್ಷರಾದ ಬಾಷ ತೀರ್ಥಹಳ್ಳಿ , ಇಹ್ಸಾನ್ ಕರ್ನಾಟಕ ಕೋಶಾಧಿಕಾರಿ ಯಾಅಕೂಬ್ ,ಇಹ್ಸಾನ್ ದಾಹಿ ಶಾಹುಲ್ ಹಮೀದ್ ಮುಸ್ಲಿಯಾರ್,ಡಾ.ರವೀಂದ್ರನ್ , ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯರಾದ ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ , ಮತ್ತು ಮುಬಾರಕ್ ಬಾರ್ಕೂರ್ ಹಾಗೂ ಉಮರ್ ಬೈಕಾಡಿ,ಮುಲ್ಲಾ ಅಯ್ಯೂಬ್ ಕೋಡಿ, ಅಶ್ರಫ್ ಕಲ್ಯಾಣಪುರ ಹಾಗೂ ಕೆಸಿಎಫ್ ಒಮಾನ್ ಸದಸ್ಯರು ಮತ್ತು ಎಸ್ ಎಸ್ ಎಫ್ ಕರ್ನಾಟಕ ಮತ್ತು ಎಸ್ ವೈ ಎಸ್ ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...