ಕಥಾ ಸ್ಪರ್ಧೆ: ಕಥೆಗಾರ ಕಪಿಲ ಹುಮನಾಬಾದೆ ದ್ವಿತೀಯ

ಕಲಬುರಗಿ(ವಿಶ್ವ ಕನ್ನಡಿಗ ನ್ಯೂಸ್): ದೀಪಾವಳಿ ಹಬ್ಬದ ಪ್ರಯುಕ್ತ ಹುಬ್ಬಳ್ಳಿ ಜನಾಂದೋಲನ ಟ್ರಸ್ಟ್ ಆಯೋಜಿಸಿದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ‘ತೇರು’ ಕಥೆ ರಚಿಸಿದ ದಾದಾಪೀರ ಜೈನಮ್ ಬೆಂಗಳೂರು ಪಡೆದುಕೊಂಡರು. ದ್ವಿತೀಯ ಸ್ಥಾನವವನ್ನು ‘ಒಳಕಲ್ಲು’ ಎಂಬ ಶೀರ್ಷಿಕೆಯಡಿಯಲ್ಲಿ ಕಥೆ ರಚಿಸಿದ ಕಪಿಲ ಹುಮನಾಬಾದೆ. ಪಿ ಕಲಬುರಗಿ ಪಡೆದುಕೊಂಡಿದ್ದಾರೆ. ತೃತೀಯ ಬಹುಮಾನಕ್ಕೆ ದೀಪಿಕಾ ಚಾಟೆ ಬೆಳಗಾವಿ ರಚಿಸಿದ ‘ಪರಕಾಯ ಪ್ರವೇಶ’ ಎಂಬ ಕಥೆ ಆಯ್ಕೆಯಾಯಿತು.

ಇಂದುಮತಿ ಪುರಾಣಿಕ ರವರು ಬರೆದ ‘ಹೈವೆಯಲ್ಲಿ ಹುದಿಗಿದ ಹಾಡುಗಳು’ ಹಾಗೂ ನೂರುಲ್ಲಾ ರವರ ‘ಅರ್ಧ ತುಂಡು ರೋಟಿ ಕಥೆಗಳು ಮೆಚ್ಚುಗೆ ಪಡೆದ ಕಥೆಗಳಾಗಿ ಬಹುಮಾನ ಪಡೆದುಕೊಂಡಿತು.

ಕಾದಂಬರಿಕಾರ, ಕಥೆಗಾರ ಕಪಿಲ ಪಿ. ಹುಮನಾಬಾದೆ ರವರು ಕಲಬುರಗಿ ಜಿಲ್ಲೆಯವರು. ಪ್ರಸ್ತುತ ವಿದ್ಯಾರ್ಥಿಯಾಗಿದ್ದಾರೆ. ಈ ಹಿಂದೆ ಹಲವಾರು ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ರಚಿಸಿದ ‘ಹಾಣಾದಿ’ ಕಾದಂಬರಿಗೆ ಗುಲ್ಬರ್ಗ ವಿವಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. ಬರಹಗಾರರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ‘ಕಾವ್ಯಮನೆ’ ಎಂಬ ಸಾಹಿತ್ಯ ತಂಡವನ್ನು ರೂಪಿಸಿದ್ದಾರೆ. ಅದಲ್ಲದೇ ಕನ್ನಡ ಸಾಹಿತ್ಯ ಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಈ ಕಪಿಲ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...