ಸ್ವಚ್ಛ ವಾತಾವರಣ ನೆಮ್ಮದಿಯ ತಾಣ ಕನ್ಯಾನದ ಕೆಳಗಿನಪೇಟೆ ಪರಿಸರ ಸ್ವಚ್ಛತೆಗೆ ಚಾಲನೆ ನೀಡಿದ ಜಮಾಅತೆ ಇಸ್ಲಾಮಿ ಹಿಂದ್ ವಿಟ್ಲ ಘಟಕ

ವಿಟ್ಲ(ವಿಶ್ವಕನ್ನಡಿಗ ನ್ಯೂಸ್): ಕನ್ಯಾನ ಗ್ರಾಮ ಪಂಚಾಯತ್ ನಲ್ಲಿನ ಕನ್ಯಾನ ಕೆಳಗಿನಪೇಟೆ ಪರಿಸರವನ್ನು, ಜಮಾಅತೆ ಇಸ್ಲಾಮಿ ಹಿಂದ್ ವಿಟ್ಲ ಘಟಕದಲ್ಲಿನ ಕಾರ್ಯಕರ್ತರು, ಗ್ರಾಮ ಪಂಚಾಯತ್ ಕನ್ಯಾನ ಇದರ ಸಹಯೋಗದೊಂದಿಗೆ ಸ್ವಚ್ಛತಾ ಕಾರ್ಯವನ್ನು ನೇರವೇರಿಸಿದರು.

ಪ್ರವಾದಿ ಮಹಮದ್ ( ಸ. ಅ.) ಮಾನವತೆಯ ಮಾರ್ಗದರ್ಶಕ ಅಭಿಯಾನದ ಪ್ರಯುಕ್ತ ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾದ್ಯಂತ ಆಚರಿಸುವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ, ಇದನ್ನು ಗ್ರಾಮಾಭಿವೃದ್ಧಿ ಅಧಿಕಾರಿ, ವಿಜಯ ಶಂಕರ್ ಆಳ್ವ ಮಿತ್ತಳಿಕೆ (P. D. O.) ರವರು ಉದ್ಘಾಟಿಸಿ, ಸ್ವಚ್ಛ ವಾತಾವರಣ ನೆಮ್ಮದಿಯ ತಾಣ ನಿರ್ಮಾಣ. ಎಂಬ ಘೋಷಣೆಯೊಂದಿಗೆ, ಜಮಾತೆ ಇಸ್ಲಾಮಿ ಹಿಂದ್ ರಾಜ್ಯದ್ಯಂತ ಆಚರಿಸುವ ಈ, ಕಾರ್ಯಕ್ರಮವು ಬಹಳ ಜನಹಿತ ಕ್ರಿಯಾತ್ಮಕ ಚಟುವಟಿಕೆಯಾಗಿದ್ದು ಇಷ್ಟೊಂದು, ಜನೋಪಯೋಗಿ ಕಾರ್ಯಗಳಲ್ಲಿ ಎಲ್ಲರೂ ಸಹಕರಿಸುವ ಅಗತ್ಯವಿದೆ ಯಾಕೆಂದರೆ ಜನರು ಒಂದಾಗಿ ಇವುಗಳಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಇತ್ಯಾದಿ ಕೆಲಸಗಳು ಯಶಸ್ವಿಯಾಗುವುದು ಎಂದವರು ಹೇಳಿದರಲ್ಲದೆ, ಈ ಕಾರ್ಯಕ್ರಮವನ್ನು ಆಯೋಜಿಸಿದ ಜಮಾಅತೆ ಇಸ್ಲಾಮಿ ಹಿಂದ್ ವಿಟ್ಲ ಘಟಕವನ್ನು ಶ್ಲಾಘಿಸಿದರು.

ನಂತರ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್ ವಿಟ್ಲ ಘಟಕದ ಸ್ಥಾನೀಯ ಅಧ್ಯಕ್ಷರಾದ ಹೈದರ್ ಅಲಿ ನೀರ್ಕಜೆಯವರು, ಸ್ವಚ್ಛತೆಯನ್ನು ಇಸ್ಲಾಂ ತನ್ನ ವಿಶ್ವಾಸದ ಭಾಗವೆಂದು ಬಣ್ಣಿಸಿದೆ. ಪ್ರವಾದಿವರ್ಯರು ಕಲಿಸಿದ ಈ ಆದರ್ಶವನ್ನು ಪ್ರತಿಪಾದಿಸುವ ಮತ್ತು ಪ್ರಾಯೋಗಿಕವಾಗಿಸುವುದನ್ನು ಪ್ರವಾದಿ ಮಹಮದ್ ಸ. ಅ. ಮಾನವತೆಯ ಮಾರ್ಗದರ್ಶಕ ಅಭಿಯಾನದ ಪ್ರಯುಕ್ತ ಕರ್ಣಾಟಕ ರಾಜ್ಯಾದ್ಯಂತ ಎಲ್ಲೆಡೆಯಲ್ಲಿಯೂ ನಮ್ಮ ಸಂಘಟನೆ ಕೈಗೊಂಡಿದೆಯೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ಸಹಕರಿಸಿದ ಗ್ರಾಮಾಭಿವೃದ್ಧಿ ಅಧಿಕಾರಿಯವರಿಗೆ ಉಪಹಾರ ನೀಡಿ ಸತ್ಕರಿಸಿ ಪ್ರವಾದಿಯವರನ್ನು ಪರಿಚಯಿಸುವ ಕಿರುಹೊತ್ತಿಗೆಯನ್ನು ಉಡುಗೊರೆ ನೀಡಿ ಗೌರವಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...