ವೆನ್ಝ್ ಅಬ್ದುಲ್ಲಾ ಕೊಲೆ ಯತ್ನ: SYS ತೀವ್ರ ಖಂಡನೆ

ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಕಾರ್ಯದರ್ಶಿ ವೆನ್ಝ್ ಅಬ್ದುಲ್ಲಾ ಕೈಕಂಬ ಅವರ ಮೇಲೆ ನಡೆದ ಕೊಲೆ ಯತ್ನವನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸಿದ್ದು ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದೆ.

ಸ್ಥಳೀಯವಾಗಿ ಧಾರ್ಮಿಕ- ಸಾಮಾಜಿಕ ಸಂಘ- ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿರುವ ಅಬ್ದುಲ್ಲಾ ಸರ್ವ ಮತಬಾಂಧವರಿಗೂ ಆತ್ಮಿಯರಾಗಿದ್ದು ಜನಪ್ರಿಯ ಸಮಾಜ ಸೇವಕರಾಗಿದ್ದಾರೆ.

ರಾತ್ರಿಯ ಮರೆಯಲ್ಲಿ ನಡೆದ ಈ ಹತ್ಯೆ ಯತ್ನದ ಹಿಂದಿರುವ ಎಲ್ಲ ದುಃಶಕ್ತಿಗಳನ್ನು ಬೇಧಿಸಿ ಅಬ್ದುಲ್ಲಾ ಅವರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕೆಂದು ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಪಿ.ಎಂ.ಉಸ್ಮಾನ್ ಸ‌ಅದಿ ಪಟ್ಟೋರಿ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ರಾಜ್ಯ ಸರಕಾರದೊಂದಿಗೆ ವಿನಂತಿಸಿಕೊಂಡಿದ್ದಾರೆ.

    Leave Your Comment

    Your email address will not be published.*

    ಚಾಟ್ ಮಾಡಿ
    1
    VK News Official Chat
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...