SMA (ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ )ದ. ಕ. ಜಿಲ್ಲಾ ಈಸ್ಟ್ ಎಲೆಕ್ಷನ್ ಕ್ರಿಯೇಶನ್ ಸಮಾವೇಶ 2020 ಮತ್ತು ತಾಜುಲ್ ಉಲಮಾ ಅನುಸ್ಮರಣೆ

(Www.vknews.in)
ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಪುತ್ತೂರು ಸಮಿತಿ ವತಿಯಿಂದ ಎಸ್ಎಂಎ ಎಲೆಕ್ಷನ್ ಕ್ರಿಯೇಶನ್ ಸಮಾವೇಶ 2020 ಹಾಗೂ ಸೈಯದ್ ತಾಜುಲ್ ಉಲಮಾ ಅನುಷ್ಮರಣಾ ಕಾರ್ಯಕ್ರಮ ನವಂಬರ್17 ರಂದು ಜಿಲ್ಲಾ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಕೊಡುಂಗೈ ರವರ ಅಧ್ಯಕ್ಷತೆಯಲ್ಲಿ ನೆಕ್ಕಿಲಾಡಿ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಅಸ್ಸಯ್ಯದ್ ಸಾದಾತ್ ತಂಙಳ್ ಕರುವೇಲು ದುವಾ ನೇತೃತ್ವ ನೀಡಿದರು.
ಎಸ್ಎಂಎ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸಮಿತಿ ಎಲೆಕ್ಷನ್ ಡೈರೆಕ್ಟರೇಟ್ ಗಳಾದ ಆತೂರು ಸಅದ್ ಮು ಸ್ಲಿಯಾರ್ ಹಾಗೂ ಕೆ ಕೆ ಕಾಮಿಲ್ ಸಖಾಫಿ ಎಲೆಕ್ಷನ್ ಕ್ರಿಯೇಶನ್ ಕಾರ್ಯಾಗಾರ ನಡೆಸಿದರು

.
ಈ ವೇಳೆಯಲ್ಲಿ ಮುಂದಿನ ಸಾಲಿನ ಎಲೆಕ್ಷನ್ ಸಮಿತಿಯ ದ ಕ ಜಿಲ್ಲಾ ಎಲೆಕ್ಷನ್ ಡಯರಕ್ಟರೇಟ್ ಸದಸ್ಯರ ಅಧಿಕಾರ ಸ್ವೀಕಾರ ಹಾಗೂ ದಾಖಲೆ ಪತ್ರಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಸಮಾವೇಶದ ಕುರಿತು ಆಶಂಸಾ ಭಾಷಣ ಎಂ. ಬಿ. ಮುಹಮ್ಮದ್ ಸಾದಿಕ್ ಮಲೆಬೆಟ್ಟುSMA ರಾಜ್ಯ ಎಲೆಕ್ಷನ್ ಡೈರೆಕ್ಟರ್,ಸಯ್ಯಿದ್ ಸಾದಾತ್ ತಂಙ್ಙಳ್ ಕರುವೇಲ್ ದ. ಕ. ಜಿಲ್ಲಾ ಈಸ್ಟ್ ಎಲೆಕ್ಷನ್ ಡೈರೆಕ್ಟರೇಟ್ ಚಯರ್ಮಾನ್ ನಡೆಸಿದರು.

ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ತಹಲೀಲ್ ಸಮರ್ಪಣ ಕಾರ್ಯಕ್ರಮವು ನಡೆಯಿತು.ರಾಜ್ಯಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ಸಖಾಫಿ ಅನುಸ್ಮರಣಾ ಭಾಷಣ ನಡೆಸಿದರು. ವೇದಿಕೆಯಲ್ಲಿ ವಿಟ್ಲ ಝೋನಲ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅರಿಯಡ್ಕ, ಎಸ್ಎಂಎರಾಜ್ಯಸಮಿತಿ ನಾಯಕ ಬಾವ ಹಾಜಿ ಪುತ್ತೂರು, ಬೆಳ್ಳಾರೆ ಜೋನಲ್ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಪಡ್ಪಿನಂಗಡಿ, ಎಸ್ಎಂಎ ಜಿಲ್ಲಾ ನಾಯಕ ಹಾಜಿ ಇಶಾಕ್, ನೆಕ್ಕಿಲಾಡಿ ಜುಮಾ ಮಸ್ಜಿದ್ ಮುದರ್ರಿಸ್ ಇಬ್ರಾಹಿಂ ಸಹದಿ, ಎಸ್ಎಂಎಜಿಲ್ಲಾ ಕೋಶಾಧಿಕಾರಿ ಯೂಸುಫ್ ಸಾಜ, ರಾಜ್ಯ ಸಮಿತಿ ಕಾರ್ಯದರ್ಶಿ ಸಾಧಿಕ್ ಮಾಸ್ಟರ್, ಯೂಸುಫ್ ಹಾಜಿ ಪುತ್ತೂರು, ಮಹಮ್ಮದ್ ಹಾಜಿ ಉಪ್ಪಿನಂಗಡಿ, ಹಮೀದ್ ಮುಂಡಾಜೆ, ಅಬ್ದುಲ್ಲಾ ಅಹ್ಸನಿ ಕಾವು, ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ಲಾ ಅಹ್ಸನಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಸದಸ್ಯರು, ಜೋನಲ್ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು, ಸದಸ್ಯರು, ರೀಜಿನಲ್ ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು ಭಾಗವಹಿಸಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...