ಕೆಸಿಎಫ್ ಸೊಹಾರ್ ಝೋನ್ ವತಿಯಿಂದ ಮೀಲಾದ್ ಕಾನ್ಫರೆನ್ಸ್ 2020

ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ನವೆಂಬರ್ 12 ಗುರುವಾರ ರಾತ್ರಿ Zoom Online ನಲ್ಲಿ “ಪ್ರವಾದಿ ಹಾದಿಯಲ್ಲಿ ಗೆಲುವಿದೆ” ಎಂಬ ಘೋಷ ವಾಕ್ಯ ದೊಂದಿಗೆ ಮೀಲಾದ್ ಕಾನ್ಫರೆನ್ಸ್ ಬಹಳ ಯಶಸ್ವಿಯಾಗಿ ನಡೆಯಿತು.

ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷರಾದ ಅಶ್ರಫ್ ಕುತ್ತಾರ್ ರವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಇವರ ದುಅ ದೊಂದಿಗೆ ಪ್ರಾರಂಭವಾದ ಈ ಸಮಾರಂಭದ ಉದ್ಘಾಟನೆಯನ್ನು ಕೆಸಿಎಫ್ ಅಂತರಾಷ್ಟ್ರೀಯ ಇಹ್ಸಾನ್ ವಿಭಾಗದ ಕಾರ್ಯದರ್ಶಿ ರಹೀಮ್ ಸ ಅದಿ ಕತರ್ ಇವರು ನೆರವೇರಿಸಿದರು.

ಝಿಕ್ರಾ ಅಕಾಡೆಮಿ ಇದರ ಪ್ರಾಂಶುಪಾಲರಾದ ನೌಫಲ್ ಸಖಾಫಿ ಕಳಸ ಇವರು ಹುಬ್ಬುರಸೂಲ್ (ಸ.ಅ) ಮತ್ತು ಇಹ್ಸಾನ್ ಕರ್ನಾಟಕ ಉತ್ತರ ಕರ್ನಾಟಕದಲ್ಲಿ ಇಸ್ಲಾಮಿಕ್ ದ ಅವಾ ಕ್ರಾಂತಿಯನ್ನು ನಡೆಸಿದ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ಸಾದಿಕ್ ಕಾಟಿಪಳ್ಳ ಮತ್ತು ಮುಆಝ್ ಕಾಟಿಪಳ್ಳ ಇವರಿಂದ ಮೌಲಿದ್ ಹಾಗೂ ಬುರ್ದಾ ಮಜ್ಲಿಸ್ ನಡೆಯಿತು. ಕೆಸಿಎಫ್ ಒಮಾನ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಹಾಜಿ ಸುಳ್ಯ , ಕೆಸಿಎಫ್ ಒಮಾನ್ ಸಾಂತ್ವನ ವಿಭಾಗ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಎರ್ಮಾಳ್ , ಕೆಸಿಎಫ್ ಒಮಾನ್ ಇದರ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಝೋನ್ ಕೋಶಾಧಿಕಾರಿ ಆರಿಫ್ ಮದಕ ಹಾಗೂ ಕೆಸಿಎಫ್ ಸೊಹಾರ್ ಝೋನ್ ಕಾರ್ಯಕಾರಿ ಸಮಿತಿಯ ಸದಸ್ಯರು, ಫಲಜ್ ಸೆಕ್ಟರ್,ಬುರೈಮಿ ಸೆಕ್ಟರ್ ಹಾಗೂ ಸೊಹಾರ್ ಸೆಕ್ಟರ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಹನೀಫ್ ಉಳ್ಳಾಲ ಸ್ವಾಗತಿಸಿ ಮಝೀರ್ ಬಜ್ಪೆ ವಂದಿಸಿ ಜಮಾಲ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...