ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ 2020 – 21 ನೇ ಸಾಲಿಗೆ ನೂತನ ಸಾರಥ್ಯ

ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಜಿಪ ಪ್ರಧಾನ ಕಾರ್ಯದರ್ಶಿ ಯೂಸುಫ್ ಅರ್ಲಪದವು ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ

(www.vknews.com) : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಯು.ಎ.ಇ ರಾಷ್ಟೀಯ ಸಮಿತಿ ಮಹಾ ಸಭೆಯು ನವಂಬರ್ 13 ಶುಕ್ರವಾರದಂದು ರಾಷ್ಟೀಯ ಸಮಿತಿ ಅಧ್ಯಕ್ಷರಾದ ಹಾಜಿ.ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ಅವರ ಘನ ಅದ್ಯಕ್ಷತೆಯಲ್ಲಿ 2019 – 20 ರ ಸಾಲಿನ ಮಹಾ ಸಭೆ ಯು ನಡೆಯಿತು. ಸಭೆಯು ಡಿ.ಕೆ.ಎಸ್.ಸಿ ಅಲ್ ನಾದ ಯುನಿಟ್ ಅಧ್ಯಕ್ಷರಾದ ಬಿ.ಟಿ.ಅಶ್ರಫ್ ಲತೀಫಿ ಉಸ್ತಾದ್ ಅವರ ದುಃವಾ ಹಾಗೂ ಅಬ್ಬು ಹಾಜಿ ಕಿನ್ಯ ರವರು ಕಿರಾಹತ್ ನೊಂದಿಗೆ ಪ್ರಾರಂಭಿಸಲಾಯಿತು. ಸಭೆಯಲ್ಲಿ ಡಿ.ಕೆ.ಎಸ್.ಸಿ ಯು.ಎ.ಇ. ರಾಷ್ಟೀಯ ಸಮಿತಿ ಪ್ರದಾನ ಕಾರ್ಯದರ್ಶಿ ಹಾಜಿ. ನವಾಜ್ ಕೋಟೆಕ್ಕಾರ್ ರವರು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕಮರುದ್ದೀನ್ ಗುರುಪುರ ಅವರು ವರದಿ ವಾಚಿಸಿ ಲೆಕ್ಕ ಪತ್ರವನ್ನು ಲೆಕ್ಕಪರಿದೋಷಕರಾದ ಅಬ್ದುಲ್ಲಾ ಪೆರುವಾಯಿ ಹಾಗೂ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಕಿನ್ಯ ರವರು ಮಂಡಿಸಿದರು. ಸಭಾಧ್ಯಕ್ಷರಾದ ಹಾಜಿ.ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ರವರು ತನ್ನ ಕಾಲಾವಧಿಯಲ್ಲಿ ಡಿ.ಕೆ.ಎಸ್.ಸಿ ಯಶಸ್ವಿಗೆ ಸಹಕರಿಸಿದ ರಾಷ್ಟೀಯ ಸಮಿತಿ ಸಹಪ್ರವರ್ತಕರು ಹಾಗೂ ಯುನಿಟ್ ಹಾಗೂ ಉಪ ಸಮಿತಿ ಗಳ ಎಲ್ಲಾ ಸದಸ್ಯರಿಗೂ ಕ್ರತಜ್ನತೆ ಸಲ್ಲಿಸುತ್ತಾ ನೂತನವಾಗಿ ಆಯ್ಕೆ ಯಾಗಲಿರುವ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡುವತೆ ವಿನಂತಿಸುತ್ತಾ ಸಮಿತಿಯನ್ನು ಬರ್ಖಾಸ್ತು ಗೊಳಿಸಿ ಚುನಾವಣಾಧಿಕಾರಿಯಾಗಿ ರಾಷ್ಟ್ರಿಯ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ ಅವರು ಜವಾಬ್ದಾರಿವಹಿಸಿಕೊಂಡು ನೂತನ ಸಮಿತಿ ರಚಿಸಲಾಯಿತು.

2020 – 2021 ನೂತನ ಪದಾಧಿಕಾರಿಗಳ ಪಟ್ಟಿ

ಗೌರವಾಧ್ಯಕ್ಷರು: ಸಯ್ಯದ್ ತ್ವಾಹ ಬಾಪಾಕಿ ತಂಘಳ್

ಸಲಹೆಗಾರರು: ಹಾಜಿ.ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್, ಹಾಜಿ ಹಸನಬ್ಬ ಕೊಲ್ನಾಡ್, ಇಬ್ರಾಹಿಂ ಸಖಾಫಿ ಕೆದಂಬಾಡಿ, ಎಸ್ ಕೆ ಅಬ್ದುಲ್ ಖಾದರ್ ಉಚ್ಚಿಲ, ಹಾಜಿ ಮೊಯ್ದೀನ್ ಕುಟ್ಟಿ ಕಕ್ಕಿಂಜೆ, ಇ.ಕೆ.ಇಬ್ರಾಹಿಂ ಕಿನ್ಯ

ಅಧ್ಯಕ್ಷರು: ಅಬ್ದುಲ್ ರಹಿಮಾನ್ ಸಜಿಪ

ಉಪಾಧ್ಯಕ್ಷರು: ಎಂ.ಇ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ನವಾಝ್ ಕೋಟೆಕಾರ್, ಅಬ್ದುಲ ಹಾಜಿ ಬೀಜಾಡಿ

ಪ್ರಧಾನ ಕಾರ್ಯದರ್ಶಿ: ಎಸ್. ಯೂಸುಫ್ ಅರ್ಲಪದವು

ಜೊತೆ ಕಾರ್ಯದರ್ಶಿ: ಶರೀಫ್ ಬೋಳ್ಮಾರ್, ಕಮರುದ್ದೀನ್ ಗುರುಪುರ, ಇಬ್ರಾಹಿಂ ಕಳತ್ತೂರು, ಉಮ್ಮರ್ ಸುಳ್ಯ

ಕೋಶಾಧಿಕಾರಿ : ಇಬ್ರಾಹಿಂ ಹಾಜಿ ಕಿನ್ಯ

ಓಡಿಟರ್ : ಅಬ್ದುಲ್ಲಾ ಪೆರುವಾಯಿ

ಕನ್ವೀನರ್: ಹಸನ್ ಬಾವ ಹಳೆಯಂಗಡಿ, ಮುಹಮ್ಮದ್ ಆಲಿ ಮೂಡುತೋಟ, ಹಾಜಿ. ಅಬ್ದುಲ್ ರಹಿಮಾನ್ ಸಂಟ್ಯಾರ್, ಇಕ್ಬಾಲ್ ಕುಂದಾಪುರ, ಮುಹಮ್ಮದ್ ಶುಕೂರ್ ಮನಿಲ, ಅಶ್ರಫ್ ಉಳ್ಳಾಲ, ಎಂ.ಇ. ಸುಲೈಮಾನ್ ಮೂಳೂರು, ಅಶ್ರಫ್ ಸತ್ತಿಕಲ್, ಮುಸ್ತಾಕ್ ಕಿನ್ಯ, ಸಮದ್ ಬಿರಾಲಿ, ಇಸ್ಮಾಯಿಲ್ ಬಾಬಾ, ಹಮೀದ್ ಸುಳ್ಯ

ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡ ಕಮಿಟಿಯನ್ನು ಎಲ್ಲರು ತಕ್ಬಿರ್ ನೊಂದಿಗೆ ಅಂಗೀಕರಿಸಲಾಯಿತು. ಹಾಗೂ ನೂತನ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಜಿಪ ರವರು ಅದಿಕಾರವನ್ನು ವಹಿಸಿ ಮಾತನಾಡುತ್ತ ಸಮಿತಿಯನ್ನು ಮುನ್ನಡಿಸಲು ಹಿರಿಯ ಸಮಿತಿ ನೇತಾರರ ಸಲಹೆ ಹಾಗೂ ಎಲ್ಲಾ ಕಮಿಟಿಯ ಸಹ ಪ್ರವರ್ತಕರು ಯುನಿಟ್ ಮಟ್ಟದಲ್ಲಿ ಎಲ್ಲರು ಒಂದಾಗಿ ಪ್ರಯತ್ನಿಸುವ ಇದ್ಕಕಾಗಿ ಎಲ್ಲರು ಸಹಕರಿಸುವಂತೆ ವಿನಂತಿಸಿದರು.

ಸಭೆಯಲ್ಲಿ ಡಿ.ಕೆ.ಎಸ್.ಸಿ ಗೌರವಾಧ್ಯಕ್ಷರಾದ ಸಯ್ಯದ್ ತ್ವಾಹ ಬಾಪಾಕಿ ತಂಘಳ್ ರವರು ನಿಕಟ ಪೂರ್ವ ಸಮಿತಿಯ ಕಾರ್ಯವೈಖರಿಯನ್ನು ಪ್ರಶಂಸಿಸುತ್ತಾ ನೂತನ ಸಮಿತಿ ಗೆ ಶುಭಹಾರೈಕೆಯೊಂದಿಗೆ ಉಪದೇಶ ಹಾಗೂ ದುಃವಾ ನಿರ್ವಹಿಸಿದರು. ಇದೆ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ ಕಾಣಿಕೆ ಡಬ್ಬಿ ಯನ್ನು ತಂಘಳ್ ರವರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಸೆಂಟ್ರಲ್ ಕಮಿಟಿ ಕಾರ್ಯಧ್ಯಕ್ಷರಾದ ಹಾಜಿ.ಹಾತಿಂ ಕಂಚಿ ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಹಸನ್ ಮೂಡುತೋಟ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಜೀಜ್ ಆತೂರು, ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚೆಯರ್ಮೆನ್ ಎಂ.ಇ.ಮೂಳೂರು ರವರು ನೂತನ ಸಮಿತಿಗೆ ಶುಭ ಹಾರೈಸಿದರು. ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಯ ಯು.ಎ.ಇ ಉಸ್ತುವಾರಿ ಹಾಜಿ.ಹಾತಿಂ ಕೂಳೂರು ರವರು ಉಪಸ್ಥಿತರಿದ್ದು ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಜೊತೆ ಕಾರ್ಯದರ್ಶಿ ಶರೀಫ್ ಬೋಳ್ಮಾರ್ ಹಾಗೂ ಇಬ್ರಾಹಿಂ ಕಳತ್ತೂರ್ ರವರು ಕಾರ್ಯಕ್ರಮ ನಿರ್ವಹಣೆಯೊಂದಿಗೆ ನೂತನ ಪ್ರದಾನ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ರವರು ಎಲ್ಲರ ಸಹಕಾರವನ್ನು ಕೋರುತ್ತಾ ಧನ್ಯವಾದ ಸಮರ್ಪಿಸಿ 3 ಸ್ವಲಾತ್ ನೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...