ಯುಎಇ: ಪಾಕಿಸ್ತಾನ ಸೇರಿದಂತೆ 11 ರಾಷ್ಟ್ರೀಯರ ಹೊಸ ವೀಸಾ ಹಂಚಿಕೆ ಸ್ಥಗಿತ

ದುಬೈ(www.vknews.in): ಪಾಕಿಸ್ತಾನ ಸೇರಿದಂತೆ ಇತರ 11 ದೇಶಗಳ ಪ್ರಜೆಗಳಿಗೆ ಸಂದರ್ಶನ ವೀಸಾ ಹಂಚಿಕೆಯನ್ನು ತಾತ್ಕಾಲಿಕವಾಗಿ ಯುಎಇ ಸರಕಾರವು ಸ್ಥಗಿತಗೊಳಿಸಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ ಹಫೀಝ್ ಚೌದರಿ ಹೇಳಿದ್ದಾರೆ.

ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೊಮಾಲಿಯಾ, ಲಿಬಿಯಾ, ಕೀನ್ಯಾ ಮತ್ತು ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಿಂದ ಯುಎಇಗೆ ಭೇಟಿ ನೀಡುವವರಿಗೆ ಹೊಸ ವೀಸಾಗಳ ವಿತರಣೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಬುಧವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದ ಚೌದರಿ, ಮುಂದಿನ ಸೂಚನೆ ಬರುವವರೆಗೆ ಈ ನಿರ್ಬಂಧವು ಮುಂದುವರಿಯುತ್ತದೆ ಎಂದು ಹೇಳಿದರು. ಕೊವಿಡ್ ಎರಡನೇ ಹಂತದ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಯುಎಇ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...