ಉಳ್ಳಾಲ ಘಟಕದ ಗೃಹರಕ್ಷಕರಿಂದ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮ

(www.vknews.in)  ಮಂಗಳೂರು:-ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಉಳ್ಳಾಲ ಘಟಕದ ವತಿಯಿಂದ ರವಿವಾರ ಬೆಳಿಗ್ಗೆ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ರವರ ನೇತೃತ್ವದಲ್ಲಿ ಉಳ್ಳಾಲ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು

ಪ್ರಾಣಾಯಾಮ ಮತ್ತು ಯೋಗ ಶಿಬಿರ:

-ಸ್ವಚ್ಛತಾ ಕಾರ್ಯಕ್ರಮದ ನಂತರ ಕಾರ್ಯಕ್ರಮ ಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಖ್ಯಾತ ಯೋಗ ಗುರುಗಳಾದ ಯೋಗರತ್ನ ಶ್ರೀ ಗೋಪಾಲ ಕೃಷ್ಣ ದೇಲಂಪಾಡಿ ರವರು ಪ್ರಾಣಾಯಾಮ ಮತ್ತು ಯೋಗ ಶಿಬಿರ ನಡೆಸಿ ಕೊಟ್ಟರು ಹಲವು ಮಂದಿ ಗೃಹರಕ್ಷಕರು ಇದರ ಸದುಪಯೋಗ ಪಡೆದುಕೊಂಡರು ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳ ಹಾಗೂ ಪೌರರಕ್ಷಣಾ ದಳದ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರು, ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುರೇಶ್ ಶೇಟ್,ಹಿರಿಯ ಗೃಹರಕ್ಷಕ ಸುನಿಲ್,ಮಂಗಳೂರು ಘಟಕದ ಸಾರ್ಜೆಂಟ್ ಸುನಿಲ್ ಕುಮಾರ್, ಸೆಕ್ಷನ್ ಲೀಡರ್ ಕೇಶವ ಶೆಟ್ಟಿಗಾರ್,ಘಟಕದ ಗೃಹರಕ್ಷಕರು ಹಾಗೂ ಗೃಹರಕ್ಷಕಿಯರು,ಪೌರರಕ್ಷಣಾ ದಳದ ಸಿಬ್ಬಂದಿ. ಭಾಗವಹಿಸಿದರು

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...