ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಸ್ಥಳದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣ ಖಂಡಿಸಿ ಹಕ್ಕೊತ್ತಾಯ ಸಭೆ: ಬೃಹತ್ ಹೋರಾಟಕ್ಕೆ ಸಿದ್ಧತೆ

ಬನ್ನೂರು(ವಿಶ್ವಕನ್ನಡಿಗ ನ್ಯೂಸ್): ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಬನ್ನೂರಿನ 40 ಎಕ್ರೆ ಸ್ಥಳದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಮುಂದಾದ ನಿರ್ಧಾರವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬನ್ನೂರಿನ ಜನತೆಯೊಂದಿಗೆ ಹಕ್ಕೊತ್ತಾಯ ಸಭೆ ಬನ್ನೂರಿನಲ್ಲಿ ನಡೆಯಿತು.

ಬನ್ನೂರಿನಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಊರವರ ಸಹಮತವಿಲ್ಲ , ಸರಕಾರಿ ಮೆಡಿಕಲ್ ಕಾಲೇಜು ಅದೇ ಸ್ಥಳದಲ್ಲಿ ನಿರ್ಮಾಣವಾಗಬೇಕು. ಈ ಬಗ್ಗೆ ಪುತ್ತೂರಿನ ಶಾಸಕರು ತೆಗೆದ ತೀರ್ಮಾನವನ್ನು ಖಂಡಿಸುತ್ತೇವೆ ಎಂದು ಊರ ಮುಖಂಡರು ತಿಳಿಸಿದರು. ಸೀಫುಡ್ ತೀರ್ಮಾನವನ್ನು ವಿರೋಧಿಸಿ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಬೃಹತ್ ಹೋರಾಟದ ರೂಪುರೇಷೆಗಳನ್ನು ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು , ಹೋರಾಟಕ್ಕೆ ಸಂಪೂರ್ಣ ಸಹಕಾರವನ್ನು ಪುತ್ತೂರು ನಗರಸಭಾ ಸದಸ್ಯೆ ಫಾತಿಮತ್ ಝೂರಾ ವ್ಯಕ್ತಪಡಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಮುಖಂಡ ಸವಾದ್ ಕಲ್ಲರ್ಪೆ , ಪುತ್ತೂರು ಜಿಲ್ಲಾಧ್ಯಕ್ಷ ರಿಯಾಝ್ ಅಂಕತ್ತಡ್ಕ, ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ಉಪಾಧ್ಯಕ್ಷ ಅಫ್ರೀದ್ ಕೂರ್ನಡ್ಕ , ಬನ್ನೂರು ಎಮ್.ವೈ.ಎಫ್ ಅಧ್ಯಕ್ಷ ಅಝರ್ ಬನ್ನೂರು ಹಾಗೂ ಊರ ಹಲವಾರು ಮುಖಂಡರು, ನಾಗರಿಕರು ಉಪಸ್ಥಿತರಿದ್ದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...