ಯಶಸ್ವಿಯಾಗಿ ನೆರವೇರಿದ ದಾರುನ್ನೂರ್ ಇಂಟರ್ ನ್ಯಾಷನಲ್ ಮೀಲಾದ್ ಫೆಸ್ಟ್ – 2020

ದುಬೈ (www.vknews.com) : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ದಾರುನ್ನೂರ್ ಯು ಎ ಇ ಕಲ್ಚರಲ್ ಸೆಂಟರ್ ಇದರ ವತಿಯಿಂದ ವರ್ಷ0ಪ್ರತಿ ಆಚರಿಸಿಕೊಂಡು ಬರುತ್ತಿದ್ದ ಬೃಹತ್ ಮೀಲಾದ್ ಆಚರಣೆಯನ್ನು ಕೋವಿಡ್ ಕಟ್ಟು ನಿಟ್ಟಿನ ನಿಮಿತ್ತ ಝೂಮ್ ಆನ್ ಲೈನ್ ಮುಖಾಂತರ ದಿನಾಂಕ 30.10.2020 ನೇ ಶುಕ್ರವಾರದಂದು ಶಾರ್ಜಾದಲ್ಲಿರುವ ಸದ್ರಿ ಸಮಿತಿ ಅದ್ಯಕ್ಷರಾದ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರ ನಿವಾಸದಲ್ಲಿ ಅವರ ಅದ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ದಾರುನ್ನೂರ್ ವಿದ್ಯಾ ಕೇಂದ್ರದ ಅದ್ಯಾಪಕರುಗಳು ಮತ್ತು ದಾರುನ್ನೂರ್ ಯು ಎ ಇ ತಾಂತ್ರಿಕ ವಿಭಾಗದ ಸಂಯೋಜನೆಯಲ್ಲಿ ಹಲವಾರು ದಿನಗಳ ಪರಿಶ್ರಮದ ಬಳಿಕ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿತ್ತು.

ಸಯ್ಯದ್ ಅಸ್ಕರ್ ಅಲಿ ತಂಗಳ್ , ಜನಾಬ್ ಸಂಶುದ್ದೀನ್ ಸೂರಲ್ಪಾಡಿ, ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರ್ , ಜನಾಬ್ ಬದ್ರುದ್ದೀನ್ ಹೆಂತಾರ್ , ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ, ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ , ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ , ಜನಾಬ್ ಮಹಮ್ಮದ್ ಸಿರಾಜ್ ಬಿ.ಸಿ ರೋಡ್, ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ, ಜನಾಬ್ ಮಹಮ್ಮದ್ ಆಶ್ರಫ್ ಬಾಂಬಿಲ, ಜನಾಬ್ ಸುಹೈಲ್ ಹಸನ್ ಚೊಕ್ಕಬೆಟ್ಟು, ಜನಾಬ್ ರಿಯಾಝ್ ಕುಳಾಯಿ ಮೊದಲಾದವರು ಈ ಭಾಗದಲ್ಲೂ , ಶೈಖುನಾ ತ್ವಾಕಾ ಉಸ್ತಾದ್ , ಜನಾಬ್ ಅಬ್ದುಲ್ ರಝಾಕ್ ಬಿ. ಸಿ ರೋಡ್, ಉಸ್ತಾದ್ ಅಮೀನ್ ಹುದವಿ, ದಾರುನ್ನೂರ್ ಅದ್ಯಾಪಕರುಗಳು, ದಾರುನ್ನೂರ್ ವಿದ್ಯಾರ್ಥಿಗಳು ಮತ್ತು ಯು ಎ ಇ ಸಮಿತಿಯ ಅತಿಥಿಗಳಾಗಿ ಜನಾಬ್ ಮಹಮ್ಮದ್ ರಫೀಕ್ ಆತೂರು ಮತ್ತು ಜನಾಬ್ ಮಹಮ್ಮದ್ ಅಶ್ರಫ್ ಪರ್ಲಡ್ಕ ಮೊದಲಾದವರು ಆ ಭಾಗದಲ್ಲೂ ಕಾಶಿಪಟ್ಣದ ಮಸ್ಜಿದ್ ಬಹ್ರ್ ಅನ್ನೂರ್ ನಲ್ಲಿ ಒಂದುಗೂಡಿದ್ದರು.

ಅಪರಾಹ್ನ ಯು ಎ ಇ ಸಮಯ ಸರಿಯಾಗಿ 1:30 ಕ್ಕೆ ಸಯ್ಯದ್ ಅಸ್ಕರ್ ತಂಗಳ್ ರವರ ನೇತೃತ್ವದಲ್ಲಿ ಯು ಎ ಇ ಯಲ್ಲೂ ಶೈಖುನಾ ತ್ವಾಕಾ ಉಸ್ತಾದರ ನೇತೃತ್ವದಲ್ಲಿ ಕಾಶಿಪಟ್ಣದಲ್ಲಿರುವ ಮಸ್ಜಿದ್ ಬಹ್ರ್ ಅನ್ನೂರಲ್ಲೂ ದಾರುನ್ನೂರ್ ಅದ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ ಸುಂದರವಾಗಿ ಮೌಲಿದ್ ಪಾರಾಯಣ ಕಾರ್ಯ ನೆರವೇರಿತು. ಸಯ್ಯದ್ ಆಸ್ಕರ್ ತಂಗಳ್ ರವರು ದು ಆ ಕಾರ್ಯ ನೆರವೇರಿಸಿದರು.

ಬಳಿಕ ದಾರುನ್ನೂರ್ ಯು ಎ ಇ ಇಂಟರ್ ನ್ಯಾಷನಲ್ ಮೀಲಾದ್ ಫೆಸ್ಟ್ – 2020 ಇದರ ಚೇರ್ಮೇನ್ ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರ್ ರವರು ಸ್ವಾಗತ ಭಾಷಣ ಮಾಡಿದರು. ಈ ಸಂದರ್ಭ ದಾರುನ್ನೂರಿನ ಬಗ್ಗೆ ಹೃಸ್ವ ವಿವರವನ್ನು ನೀಡಿದರು. ವಿಷನ್- 2030 ಬಗ್ಗೆ ವಿವರಣೆ ನೀಡುತ್ತಾ ದಾರುನ್ನೂರ್ ಒಂದು ವಿಶ್ವ ವಿದ್ಯಾಲಯವಾಗಿ ನೋಡುವುದೇ ನಮ್ಮೆಲ್ಲರ ಅತಿ ದೊಡ್ಡ ಕನಸಾಗಿದ್ದು ಅದನ್ನು ಸಾಕ್ಷಾತ್ಕಾರಗೊಳಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ವಿವರಿಸಿದರು.

ಬಳಿಕ ದಾರುನ್ನೂರ್ ಕೇಂದ್ರ ಸಮಿತಿ ಅದ್ಯಕ್ಷರಾದ ಶೈಖುನಾ ತ್ವಾಕಾ ಉಸ್ತಾದರು ಕಾರ್ಯಕ್ರಮವನ್ನು ಸಾಂಪ್ರದಾಯಕವಾಗಿ ಉದ್ಘಾಟಿಸಿದರು. ದಾರುನ್ನೂರಿನ ಪ್ರಸಕ್ತ ಯೋಜನೆಗಳ ಬಗ್ಗೆ ಈ ಸಂದರ್ಭ ವಿವರಿಸಿದರು.

ಬಳಿಕ ದಾರುನ್ನೂರಿನ ಸಂಪೂರ್ಣ ಪರಿಚಯವನ್ನು ದಾರುನ್ನೂರ್ ಯು ಎ ಇ ಅದ್ಯಕ್ಷರಾದ ಜನಾಬ್ ಸಂಶುದ್ದೀನ್ ಸೂರಲ್ಪಾಡಿಯವರು ನೀಡಿದರು. ಈ ಸಂದರ್ಭ ದಾರುನ್ನೂರಿನ ಭವಿಷ್ಯದ ಒಟ್ಟು ಯೋಜನೆಗಳು ಮತ್ತು ಗುರಿಯನ್ನು ಸವಿವರವಾಗಿ ವಿವರಿಸಿದರು.

ಬಳಿಕ ದಾರುನ್ನೂರ್ ವಿದ್ಯಾರ್ಥಿಗಳಿಂದ ಇಸ್ಲಾಮಿಕ ಪ್ರತಿಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಆರನೇ ತರಗತಿಯ ಸಅದ್ ರವರಿಂದ ಸುಶ್ರವ್ಯ ಕಂಠದ ಕಿರಾಅತ್ ಪಠಣ ಗೆಯ್ಯಲ್ಪಟ್ಟಿತು.

ಐದನೇ ತರಗತಿ ಅಯಾಸ್ ರವರಿಂದ ಕನ್ನಡ ನೆಬಿ ಮದ್ಹ್ ಗಾನ , ಐದನೇ ತರಗತಿಯ ಶುಮೈಲ್ ರವರಿಂದ ಅರಬಿಕ್ ಭಾಷಣ , ಆರನೇ ತರಗತಿಯ ಸಹದ್ ರವರಿಂದ ಉರ್ದು ನೆಬಿ ಮದ್ಹ್ ಗಾನ, ಆರನೇ ತರಗತಿಯ ಝಾಹಿದ್ ರವರಿಂದ ಇಂಗ್ಲೀಷ್ ಭಾಷಣ , ನಾಲ್ಕನೇ ತರಗತಿಯ ಶಫೀಕ್ ರವರಿಂದ ಧಾರ್ಮಿಕ ಮತಪ್ರಭಾಷಣ, ಏಳನೇ ತರಗತಿಯ ರವೂಫ್ ರವರಿಂದ ಅರಬಿಕ್ ಗಾನ , ಆರನೇ ತರಗತಿಯ ಯಾಹ್ಯಾ ರವರಿಂದ ಉರ್ಧು ಭಾಷಣ , ಆರನೇ ತರಗತಿಯ ಫಾರೂಕ್ ರವರಿಂದ ಮಲಯಾಳಂ ನೆಬಿ ಮದ್ಹ್ ಗಾನ , ಮಿಸ್ಬಾಹ್ , ಜಸೀಮ್, ರಿಫಾಹ್ , ಹನೀಫ್ , ಆಶಿಕ್ ರವರಿಂದ ಸುಂದರವಾಗಿ ಮಾಷಪ್ ಹಾಡು ನೆರವೇರಿತು. ಹೀಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಒಂದು ಗಂಟೆಗಳ ಕಾಲ ಎಲ್ಲರನ್ನು ನಿಬ್ಬೆರಗುಗೊಳಿಸಿ ಒಂದಕ್ಕಿಂತ ಇನ್ನೊಂದು ಗಮನ ಸೆಳೆದು, ಕಲಿಕೆಯ ಗುಣಮಟ್ಟವನ್ನು ಎತ್ತಿ ತೋರಿಸಿ ಅತ್ಯಂತ ಮನೋಹರವಾಗಿ ನೆರವೇರಿತು. ದಾರುನ್ನೂರ್ ಕ್ಯಾಂಪಸ್ ನಲ್ಲಿ ನಡೆದ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಸಿದ್ದೀಕ್ ವೇಣೂರು , ಆಸಿಫ್ ಮಂಗಳೂರು , ಹಕೀಮ್ ಬಣ್ಕಲ್, ಅನ್ವರ್ ಯಾಸಿರ್ , ಶಹೂದ್ ಮೊದಲಾದವರು ಅತ್ಯಂತ ಸಮರ್ಪಕವಾಗಿ ನೆರವೇರಿಸಿ ಜನಮೆಚ್ಚುಗೆ ಗಳಿಸಿದರು.

ಪ್ರಾಸ್ತಾವಿಕ ಭಾಷಣದ ಪ್ರಯುಕ್ತ ಉಸ್ತಾದ್ ಸಿಂಸಾರುಲ್ ಹಕ್ ಹುದವಿ ಯವರು ಸಂಜೆ 3.45 ಕ್ಕೆ ಸರಿಯಾಗಿ ಆಗಮಿಸಿದರು. ಹತ್ತು ಹಲವು ಕಾರ್ಯಕ್ರಮಗಳ ನಿಮಿತ್ತ ತುಂಬಾ ಕಾರ್ಯನಿರತರಾಗಿದ್ದುದರಿಂದ ಕೇವಲ 15 ನಿಮಿಷಗಳ ಕಾಲ ಮಾತನಾಡಿದರು. ಈ ಸಂದರ್ಭ ದಾರುನ್ನೂರಿನ ಕಾರ್ಯವೈಖರಿಗಳನ್ನು ಶ್ಲಾಘಿಸಿ ಮಾತನಾಡಿದರು .

ಬಳಿಕ ಇಂಟರ್ ನ್ಯಾಷನಲ್ ಮೀಲಾದ್ ಫೆಸ್ಟ್ ಪ್ರಯುಕ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿದ್ದ ಹಲವು ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದವರ ಹೆಸರನ್ನು ಘೋಷಿಸಲಾಯಿತು.

ಪುರುಷ ವಿಭಾಗದಲ್ಲಿ ವಿಜೇತರನ್ನು ಜನಾಬ್ ಬದ್ರುದ್ದೀನ್ ಹೆಂತಾರ್ ರವರು ಮತ್ತು ಮಹಿಳೆ ವಿಭಾಗದ ವಿಜೇತರನ್ನು ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್ ರವರು ಘೋಷಿಸಿದರು.

ಜೂನಿಯರ್ ವಿಭಾಗದಲ್ಲಿ

ಹಸನ್ ರಝ್ವಿ ನೆಬಿ ಮದ್ಹ್ ಹಾಡು – ಪ್ರಥಮ
ಸುಹಾನ್ ಕುಝೈಮ್ ನೆಬಿ ಮದ್ಹ್ ಹಾಡು – ಪ್ರಥಮ
ಆಶಿಕ್ ಎಂ ಎ ನೆಬಿ ಮದ್ಹ್ ಹಾಡು – ದ್ವಿತೀಯ
ಮಹಮ್ಮದ್ ಮಿಕ್ದಾದ್ – ಕಿರಾ ಅತ್ – ಪ್ರಥಮ
ಅಬ್ದುಲ್ ರಹ್ಮಾನ್ ಶಹ್ಬಾಝ್ – ಕಿರಾ ಅತ್ – ದ್ವಿತೀಯ
ಮಹಮ್ಮದ್ ಶೈಬಾನ್ – ಭಾಷಣ – ಪ್ರಥಮ
ಶಮೀಮ್ ಮಹಮ್ಮದ್ – ಭಾಷಣ – ದ್ವೀತೀಯ
ಮಹಮ್ಮದ್ ಇಫಾಮ್ – ಡ್ರಾಯಿಂಗ್ – ಪ್ರಥಮ
ಹಾತಿಮ್ – ಡ್ರಾಯಿಂಗ್ – ದ್ವಿತೀಯ
ಮಹಮ್ಮದ್ ಮುನೀಶ್ – ಡ್ರಾಯಿಂಗ್ – ದ್ವಿತೀಯ

ಸಬ್ ಜೂನಿಯರ್ ವಿಭಾಗ

ಶೈಖ್ ಮಹಮ್ಮದ್ ಝಿಯಾನ್ – ಕಿರಾ ಅತ್ – ಪ್ರಥಮ
ಮಹದಿ ಹಸನ್ – ಕಿರಾ ಅತ್ – ದ್ವಿತೀಯ
ಅಹಿಯಾನ್ ಸಮದ್ – ಮದ್ಹ್ ಹಾಡು – ಪ್ರಥಮ
ಮಹಮ್ಮದ್ ಮುನೀಶ್ – ಮದ್ಹ್ ಹಾಡು – ದ್ವಿತೀಯ

ಸೀನಿಯರ್ ವಿಭಾಗ

ಸಂಶುದ್ದೀನ್ ಹೆಂತಾರ್ – ಮದ್ಹ್ ಹಾಡು – ಪ್ರಥಮ
ಮಹಮ್ಮದ್ ನಿಯಾಝ್ – ಮದ್ಹ್ ಹಾಡು – ದ್ವಿತೀಯ
ಮಹಮ್ಮದ್ ಸುಹೈಲ್ – ಕಿರಾ ಅತ್ – ಪ್ರಥಮ
ಮುರ್ಷಿದ್ ಫೈಝಿ – ಕಿರಾ ಅತ್ – ದ್ವಿತೀಯ
ಮಹಮ್ಮದ್ ಸುಹೈಲ್ – ಭಾಷಣ – ಪ್ರಥಮ
ಮಹಮ್ಮದ್ ಸೌರಿಝ್ – ಭಾಷಣ – ದ್ವಿತೀಯ

ಮಹಿಳೆಯರ ಸೀನಿಯರ್ ವಿಭಾಗ

ಅಫ್ರಾ – ಅರಬಿಕ್ ಕಾಲಿಗ್ರಫಿ – ಪ್ರಥಮ
ಝೈನಬ್ ಶಾಲೂಲ – ಅರಬಿಕ್ ಕಾಲಿಗ್ರಫಿ – ದ್ವಿತೀಯ
ಶನಲ್ ಹಲೀಮ – ಕರಕೌಶಲ – ಪ್ರಥಮ
ಮಬ್ರೂರಾ ಇನಾಯ – ಕರ ಕೌಶಲ – ದ್ವಿತೀಯ
ಸುವೈಬ ಅಝ್ ಮೀನ್ – ಕರ ಕೌಶಲ – ದ್ವಿತೀಯ

ಜೂನಿಯರ್ ವಿಭಾಗ

ಖದೀಜತ್ ಅಫ್ನ – ಡ್ರಾಯಿಂಗ್ – ಪ್ರಥಮ
ಶನೂನ್ ಶಬಿಯ – ಡ್ರಾಯಿಂಗ್ – ದ್ವಿತೀಯ

ಸಬ್ ಜೂನಿಯರ್ ವಿಭಾಗ

ಆಫ್ ಶೀನ್ – ಡ್ರಾಯಿಂಗ್ – ಪ್ರಥಮ
ಫಾತಿಮ ಪೂಡೆಲ್ – ಡ್ರಾಯಿಂಗ್ – ದ್ವಿತೀಯ
ಆಯಿಶಾ ಇಫ್ರಾ – ಮದ್ಹ್ ಹಾಡು – ಪ್ರಥಮ
ರಿಫಾ ಫಾತಿಮಾ – ಮದ್ಹ್ ಹಾಡು – ದ್ವಿತೀಯ
ಫಾತಿಮಾ ಝಹ್ರಾ ಆಸಿಫ್ ಫೈಝಿ – ಕಿರಾ ಅತ್ – ಪ್ರಥಮ
ಫಾತಿಮಾ ಅಲ್ ಝಹ್ರಾ ಶೈಖ್ ಮಹಮ್ಮದ್ – ದ್ವಿತೀಯ

ವಿಜೇತರಿಗೆ ಫಲಕದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಅದೇ ರೀತಿ ಸ್ಪರ್ಧಿಸಿದ ದಾರುನ್ನೂರ್ ವಿದ್ಯಾರ್ಥಿಗಳಿಗೆ ಫಲಕದೊಂದಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಸುಮಾರು 285 ಮಂದಿಗೆ ಭಾಗವಹಿಸುವಿಕೆಯ ಪ್ರಶಸ್ತಿ ಪತ್ರ ನೀಡಲಾಗುವುದು.

ಬಳಿಕ ಸಯ್ಯದ್ ಅಸ್ಕರ್ ಅಲಿ ತಂಗಳ್ ರವರು ಶುಭ ಹಾರೈಸಿ ಮಾತನಾಡಿದರು. ಸಯ್ಯದ್ ಅಲಿ ತಂಗಳ್ ರವರು ದುಆ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ತಂಗಳ್ ರವರಿಗೆ ಸಮಯಕ್ಕೆ ಸರಿಯಾಗಿ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ. ಬಳಿಕ ಶೈಖುನಾ ತ್ವಾಕ ಉಸ್ತಾದರು ದುಆ ಕಾರ್ಯ ನೆರವೇರಿಸಿದರು.

ಯು ಎ ಇ ಕಡೆಯಿಂದ ಜನಾಬ್ ಸಿರಾಜ್ ಬಿ ಸಿ ರೋಡ್ ಮತ್ತು ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ ಯವರು ಅತ್ಯಂತ ಯಶಸ್ವಿಯಾಗಿ ತಾಂತ್ರಿಕ ನಿರ್ವಹಣೆ ನೆರವೇರಿಸಿದರು. ಅದೇ ರೀತಿ ದಾರುನ್ನೂರ್ ಕೇಂದ್ರದಿಂದ ಪ್ರಾಂಶುಪಾಲರಾದ ಅಮೀನ್ ಹುದವಿ , ಹುಸೈನ್ ರಹ್ಮಾನಿ, ತ್ವಾಹಾ ಹುದವಿ , ಮುಯೀನ್ ಹುದವಿ ಮೊದಲಾದವರು ಮಕ್ಕಳ ಕಾರ್ಯಕ್ರಮವನ್ನು ಉತ್ತಮವಾಗಿ ಸಂಯೋಜಿಸಿದರು . ಉಸ್ತಾದ್ ಮುಬಶ್ಹಿರ್ ಹುದವಿ , ಹಸನ್ ಹುದವಿ , ಶಾಹಿದ್ ಹುದವಿ , ಸಿದ್ದೀಕ್ ಹುದವಿ ಮೊದಲಾದವರು ಅಚ್ಚುಕಟ್ಟಾಗಿ ತಾಂತ್ರಿಕ ನಿರ್ವಹಣೆ ನೆರವೇರಿಸಿದರು . ಝೂಮ್ ಆಪ್ ಮುಖಾಂತರ ಕಾರ್ಯಕ್ರಮ ನಡೆಸಿದ್ದರೂ ಯಾವುದೇ ಅಡಚಣೆ ಇಲ್ಲದೆ ಕಣ್ಣ ಮುಂದೆಯೇ ನಡೆಯುವಂತೆ ಸುಂದರವಾಗಿ, ನಿಶ್ಯಬ್ಧವಾಗಿ ಸಂಯೋಜಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮೀಲಾದ್ ಸಮಿತಿ ಕಾರ್ಯದರ್ಶಿ ಜನಾಬ್ ಮಹಮ್ಮದ್ ಅಶ್ರಫ್ ಬಾಂಬಿಲ ರವರು ವಂದನಾರ್ಪಣೆಗೈದರು. ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮಕ್ಕೆ ಒಟ್ಟು 150 ಕ್ಕಿಂತಲೂ ಹೆಚ್ಚು ಮಂದಿ ಆನ್ ಲೈನ್ ನಲ್ಲಿ ಸೇರಿದ್ದರು.

ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಜನಾಬ್ ನವಾಝ್ ಬಿ ಸಿ ರೋಡ್ , ಜನಾಬ್ ಸಫಾ ಇಸ್ಮಾಯಿಲ್ ಬಜ್ಪೆ, ಜನಾಬ್ ಇಸ್ಮಾಯಿಲ್ ಮುಂಝಿರ್, ಜನಾಬ್ ಮಹಮ್ಮದ್ ಶಬೀರ್ ಫರಂಗಿಪೇಟೆ, ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ, ಜನಾಬ್ ಮಹಮ್ಮದ್ ಮಾಡಾವು, ಜನಾಬ್ ಅನ್ಸಾಫ್ ಪಾತೂರ್, ದಾರುನ್ನೂರ್ ಮ್ಯಾನೇಜರ್ ಜನಾಬ್ ಅಬ್ದುಲ್ ಹಕೀಮ್ ಮುಲಾರ್ಪಟ್ಣ ಮೊದಲಾದವರು ಸಹಕರಿಸಿದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...