ನಂದಾವರ:ಎಸ್ಡಿಪಿಐ ವತಿಯಿಂದ ನಂದಾವರ ಕೋಟೆ ಮಸೀದಿ ಪರಿಸರ ಸ್ವಚ್ಛತೆ

ಮಂಗಳೂರು(www.Vknews.in):ಬಂಟ್ವಾಳ ತಾಲ್ಲೂಕಿನ ನಂದಾವರ ಕೋಟೆ ಮಸೀದಿ ಪರಿಸರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.


ಎಸ್.ಡಿ.ಪಿ.ಐ ನಂದಾವರ ಬ್ರಾಂಚ್ ಅಧ್ಯಕ್ಷ ಆಸೀಫ್ ನಂದಾವರ ಅವರ ಮುಂದಾಳ್ವತದಲ್ಲಿ ಜರುಗಿದ ಈ ಶ್ರಮದಾನದಲ್ಲಿ ಮಸೀದಿಯ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಮೀರ್ ನಂದಾವರ ಮತ್ತು ಹಲವಾರು ಕಾರ್ಯಕರ್ತರು

ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು ಹಾಗೂ ನಂದಾವರ ಕೇಂದ್ರ ಜುಮ್ಮಾ ಮಸೀದಿ ಕಾರ್ಯದರ್ಶಿಯಾದ ಇಮ್ರಾನ್ ಹೈವೇ ಶ್ರಮದಾನಿಗಳಿಗೆ ಚಹಾ ಮತ್ತು ಉಪಹಾರದ ವ್ಯವಸ್ಥೆ ಮಾಡಿ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...