ಸ್ಕಾಲರ್ಶಿಪ್‌ಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ನಿಂದ ಅಝಾದ್ ಭವನ್ ಮಾರ್ಚ್

ಮಂಗಳೂರು (www.vknews.com) : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲೆ ವತಿಯಿಂದ ಸ್ಕಾಲರ್ಶಿಪ್ ಮಂಜೂರಾತಿಯಲ್ಲಿ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಹಲವು ಬೇಡಿಕೆಗಳನ್ನು ಆಗ್ರಹಿಸಿ ನಗರದ ಅರ್ ಟಿ ಒ ಕಛೇರಿಯಿಂದ ಅಝಾದ್ ಭವನಕ್ಕೆ ವಿದ್ಯಾರ್ಥಿಗಳು ಮಾರ್ಚ್ ಮಾಡಿದರು.

ಬಳಿಕ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿ ಜೆ ‘ ಸರಕಾರಕ್ಕೆ ಸ್ಕಾಲರ್‌ಶಿಪ್ ಗೆ ನೀಡಲು ಖಜಾನೆಯಲ್ಲಿ ದುಡ್ಡಿಲ್ಲ ಆದರೆ ಮರಾಠ ಪ್ರಾಧಿಕಾರಕ್ಕೆ, ಲಿಂಗಾಯುತ ಪ್ರಾಧಿಕಾರಕ್ಕೆ ಕೋಟಿ ಕೋಟಿ ಹಣ ನೀಡುತ್ತಿದ್ದಾರೆ. ಈಗಾಗಲೇ ಶಾಲಾ ಕಾಲೇಜುಗಳು ಆನ್ಲೈನ್ ಮೂಲಕ ಆರಂಭವಾಗಿದ್ದು ಶಿಕ್ಷಣ ಸಂಸ್ಥೆಗಳು ದಾಖಲಾತಿ ಶುಲ್ಕವನ್ನು ಒಂದೇ ಕಂತಿನಲ್ಲಿ ಕೇಳುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಸ್ಕಾಲರ್ಶಿಪ್‌ಗಾಗಿ ಕಾಯುತ್ತಿದ್ದಾರೆ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷೆ ಮುಫೀದಾ ರಹಮಾನ್ ಮಾತನಾಡಿ ‘ಮಂಗಳೂರಿನ ಮೌಲಾನಾ ಅಝಾದ್ ಭವನದ ಕೆಲ ಸಿಬ್ಬಂದಿಗಳು ಸ್ಕಾಲರ್ಶಿಪ್ ವಂಚಿತ ವಿದ್ಯಾರ್ಥಿಗಳೊಂದಿಗೆ ಬೇಜವಾಬ್ದಾರಿಯ ವರ್ತನೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು‌. ಅಲ್ಲದೇ ಸರಕಾರ ವಿದ್ಯಾರ್ಥಿ ವೇತನ ಶೀಘ್ರ ಬಿಡುಗಡೆ ಮಾಡಬೇಕು ಮತ್ತು ಕಡಿತಗೊಳಿಸಿರುವ ಪಿ ಹೆಚ್ ಡಿ, ಎಂ ಫಿಲ್ ಫೆಲೋಶಿಪ್ ಮುಂದುವರಿದಬೇಕು ಇಲ್ಲದಿದ್ದರೆ ಕಾಲೇಜು ಆರಂಭವಾದ ನಂತರ ಜಿಲ್ಲಾಧ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟ ಮಾಡಲಾಗುವುದು ಎಂದರು.

ಅಧಿಕಾರಿಗಳಿಂದ ವಿದ್ಯಾರ್ಥಿ ಮುಖಂಡರೊಂದಿಗೆ ಸಭೆಗೆ ಆಹ್ವಾನ

ಕ್ಯಾಂಪಸ್ ಫ್ರಂಟ್ ನಾಯಕರ ಮನವಿಯನ್ನು ಪಡೆಯಲು ಬಂದ ಕಛೇರಿಯ ಅಧಿಕಾರಿಗಳು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದು ಉನ್ನತ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಕಾರ್ಯದರ್ಶಿ ಮುನೀರ್ ಬಜಾಲ್ , ಜಿಲ್ಲಾ ಮುಖಂಡ ತಾಜುದ್ದೀನ್, ಮಂಗಳೂರು ಏರಿಯಾ ಅಧ್ಯಕ್ಷೆ ಮುರ್ಶಿದಾ ಉಪಸ್ಥಿತರಿದ್ದರು.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...