ಕೆ.ಸಿ.ರೋಡ್ ಪಿಲಿಕೂರ್ ಕಳ್ಳರ ಜಾಲ ಭಯಭೀತಿಯಲ್ಲಿ ಸಾರ್ವಜನಿಕರು

ಮಂಗಳೂರು (www.vknews.com) : ಕೆ.ಸಿ.ರೋಡ್ ಪಿಲಿಕೂರ್ ಅಜ್ಜಿನಡ್ಕ ಪರಿಸರದಲ್ಲಿ ಕಳ್ಳರ ತಂಡವೊಂದು ಕಾರ್ಯಾಚರಿಸುತ್ತಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚೆಗೆ ಪಿಲಿಕೂರ್ ನಡುರಸ್ತೆಯಲ್ಲಿ ಓಮ್ನಿಯಲ್ಲಿ ಆಗಮಿಸಿದ ತಂಡ ರಸ್ತೆ ಬದಿನಿಂತಿದ್ದ ಮಹಿಳೆ ಓರ್ವಪುರುಷನನ್ನು ಅಡ್ಡಗಟ್ಟಿ ನಗದು ದೋಚಿ ಪರಾರಿಯಾಗಿದ್ದು ಇದರಿಂದ ಎಚ್ಚಿತ್ತ ಪಿಲಿಕೂರ್ ಯುವಕರ ತಂಡ ರಾತ್ರಿ ಕಾವಲಿಗೆ ನಿಂತಿರುವಾಗಲೇ ಓಮ್ನಿಯಲ್ಲಿ ಆಗಮಿಸಿದ ಕಳ್ಳರು ಯುವಕರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಕೆ.ಸಿ ನಗರದಲ್ಲಿ ಸುಮಾರು ಏಳೆಂಟು ಮನೆಗಳಿಗೆ ನುಗ್ಗಿ ನಗನಗದು ದೋಚಿದ್ದರೆ ನವೆಂಬರ್ 30 ಸೋಮವಾರ ಅಜ್ಜಿನಡ್ಕ ಪರಿಸರದ ಅಂಗಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ ಕಳ್ಳತನ ಸ್ಥಳಕ್ಕೆ ಉಳ್ಳಾಲ ಹಾಗೂ ಕೊಣಾಜೆ ಪೋಲೀಸರು ಭೇಟಿ ನೀಡಿದ್ದು ಪತ್ತೆಗಾಗಿ ಬಲೆಬೀಸಿದ್ದಾರೆ ಈ ಕಳ್ಳರ ಹಾವಳಿ ಪೊಲೀಸರಿಗೂ ತಲೆ ನೋವಾಗಿದೆ.

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...