ಇಂದು ಕೆಸಿಎಫ್ ಯುಎಇ 49 ನೇ ನ್ಯಾಷನಲ್ ಡೇ ಕಾರ್ಯಕ್ರಮ: ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್

ಯುಎಇ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ವತಿಯಿಂದ ಯುಎಇಯ 49 ನೇ ರಾಷ್ಟ್ರೀಯ ದಿನಾಚರಣೆಯನ್ನು ಡಿಸೆಂಬರ್ 2 ರಂದು ಝೂಮ್ ಎಪ್ಲಿಕೇಶನ್ ಮೂಲಕ ನಡೆಸಲಾಗುವುದಾಗಿ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ದುಬೈ ತಿಳಿಸಿದ್ದಾರೆ.

ಮಾನವೀಯ ಮೌಲ್ಯಗಳಿಗೆ ಬೆಲೆ ಕಲ್ಪಿಸುವ ಯುಎಇಯಲ್ಲಿ ಲಕ್ಷಾಂತರ ಅನಿವಾಸಿ ಕನ್ನಡಿಗರು ಉದ್ಯಮಿಗಾಳಾಗಿ ಹಾಗೂ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. 49ನೇ ಯುಎಇ ರಾಷ್ಟ್ರೀಯ ದಿನಾಚರಣೆಯನ್ನು #ThankyouUAE ಹೆಸರಿನಲ್ಲಿ ಆಯೋಜಿಸಿದ್ದು ಡಿಸೆಂಬರ್ 2 ರಂದು ಸಂಭ್ರಮದಿಂದ ಆಚರಿಸಲು ಸಜ್ಜಾಗಿ ನಿಂತಿದೆ.

ಕಳೆದ 7 ವರ್ಷಗಳಿಂದ ಕೆಸಿಎಫ್ ಯುಎಇಯಲ್ಲಿ ಕಾರ್ಯಾಚರಿಸುತ್ತಿದ್ದು ಹಲವಾರು ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. #ThankyouUAe ಯುಎಇ 49 ನೇ ರಾಷ್ಟ್ರೀಯ ದಿನದ ಪ್ರಯುಕ್ತ ಡಿಸೆಂಬರ್ 2 ರಂದು ಮಧ್ಯಾಹ್ನ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ಸನ್ಮಾನ್ಯ ಶ್ರೀ ರಮೇಶ್ ಕುಮಾರ್, ಎಮಿರೇಟ್ಸ್ ನ ಖ್ಯಾತ ಬರಹಗಾರ ಅಹ್ಮದ್ ಇಬ್ರಾಹೀಂ ದುಬೈ, ಜಿ.ಎ ಬಾವಾ, ಕರ್ನಾಟಕ ವಕ್ಫ್ ಬೋರ್ಡ್ ಸದಸ್ಯ ಶಾಫೀ ಸಅದಿ ಬೆಂಗಳೂರು, ಕೆಸಿಎಫ್ ಅಂತರಾಷ್ಟ್ರೀಯ ಅಧ್ಯಕ್ಷ ಡಾ। ಶೈಖ್ ಬಾವಾ ಹಾಜಿ ಮಂಗಳೂರು, ಜನರಲ್ ಸೆಕ್ರೆಟರಿ ಕಮರುದ್ದೀನ್ ಗೂಡಿನಬಳಿ ಭಾಗವಹಿಸಲಿದ್ದಾರೆ ಎಂದು ಕೆಸಿಎಫ್ ಮೀಡಿಯಾ ಮತ್ತು ಪಬ್ಲಿಕೇಶನ್ ವಿಭಾಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...