ಸಿಡ್ನಿ(ವಿಶ್ವಕನ್ನಡಿಗ ನ್ಯೂಸ್): ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯದ ವೇಳೆ ಕೊಹ್ಲಿ ಮೈಲಿಗಲ್ಲು ತಲುಪುವ ಮೂಲಕ ವಿರಾಟ್ ಕೊಹ್ಲಿ 12,000 ಏಕದಿನ ಪಂದ್ಯದಲ್ಲಿ ರನ್ ಗಳಿಸಿದ ಅತಿ ವೇಗದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
50 ಓವರ್ ನಲ್ಲಿ ಅತೀ ವೇಗವಾಗಿ 12 ಸಾವಿರ ರನ್ ಪೂರೈಸುವ ಮೂಲಕ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ 50 ಓವರ್ ಗಳ ಮಾದರಿಯ ಕ್ರಿಕೆಟ್ ನಲ್ಲಿ ಸುಮಾರು 60 ರ ಸರಾಸರಿಯಲ್ಲಿ 43 ಶತಕಗಳು ಹಾಗೂ 59 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಸಿಡ್ನಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ 21 ಗಳಿಸಿದ್ದ ಕೊಹ್ಲಿ ಎರಡನೇ ಪಂದ್ಯದಲ್ಲಿ 81 ರನ್ ಗಳಿಸಿದ್ದಾರೆ.