SSF, SYS, SBS ವಳಾಲು ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

ಬಜತ್ತೂರು(ವಿಶ್ವಕನ್ನಡಿಗ ನ್ಯೂಸ್): SSF, SYS, SBS ವಳಾಲು ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್, ತಾಜುಲ್ ಉಲಮಾ, ನೂರುಲ್ ಉಲಮಾ,ಶಂಶುಲ್ ಉಲಮಾ, ಸಹಿತ ಉಲಮಾ ನಾಯಕರ ಮತ್ತು ನಿನ್ನೆ ನಮ್ಮಿಂದ ಅಗಲಿದ ಉಪ್ಪಿನಂಗಡಿ ಪರಿಸರದ ಅಹ್ಲುಸ್ಸುನ್ನಾದ ಪ್ರಮುಖ ಉಮರಾ ನೇತಾರ, ತಾಜುಲ್ ಉಲಮಾ ರವರ ಆಪ್ತ ಮರ್ಹೂಂ ಸಾಗರ್ ಹಂಝ ಹಾಜಿ ನೆಲ್ಯಾಡಿ ಯವರ ಅನುಸ್ಮರಣಾ ಸಂಗಮವು ನವಂಬರ್ 30 ಸೋಮವಾರ ರಾತ್ರಿ ಇಶಾಅ್ ನಮಾಝ್ ಬಳಿಕ ಬಹು ಹಮೀದ್ ಬಿ ಹೆಚ್ ರವರ ನಿವಾಸದಲ್ಲಿ ಬಹು ಎಫ್ ಹೆಚ್ ಮುಹಮ್ಮದ್ ಮಿಸ್ಬಾಹಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪ್ರಸ್ತುತ ಸಂಘಟನೆ ಗಳ ವತಿಯಿಂದ ಮುಂದಿನ ಶನಿವಾರ ನಡೆಯಲಿರುವ ವಾರ್ಷಿಕ ಖುತುಬಿಯ್ಯತ್ ಮಜ್ಲಿಸ್, ಹಾಗೂ ಡಿಸೆಂಬರ್ 13 ಕ್ಕೆ ನಡೆಯಲಿರುವ SSF ಮಹಾಸಭೆ ಯ ದಿನಾಂಕ ಗಳನ್ನು ಪ್ರಖ್ಯಾಪಿಸಲಾಯಿತು.

ಕಾರ್ಯಕ್ರಮದಲ್ಲಿ MJM ವಳಾಲು, SYS ವಳಾಲು, SSF ವಳಾಲು, SBS ವಳಾಲು ಇವುಗಳ ಹಲವು ನಾಯಕರು ಮತ್ತು ಸದಸ್ಯರು ಹಾಜರಾಗಿದ್ದರು. ಅಬ್ದುರ್ರಹ್ಮಾನ್ ಮರ್ಝೂಖಿ ವಳಾಲು ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...