ಸೌದಿ ಅರೇಬಿಯಾ: ಭಾರತಕ್ಕೆ ನೇರ ವಿಮಾನ ಹಾರಾಟ ಪ್ರಸ್ತಾಪ ಮತ್ತೆ ಮುಂದೂಡಿಕೆ

ಜೆದ್ದಾ(www.vknews.in): ಸೌದಿ ಅರೇಬಿಯಾದಿಂದ ಭಾರತಕ್ಕೆ ನೇರ ವಿಮಾನ ಹಾರಾಟ ಭಾಗಶಃ ಈ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸೌದಿ ವಿಮಾನಯಾನ ಪ್ರಾಧಿಕಾರವು ಈ ಹಿಂದೆ ಹೇಳಿದ್ದರೂ ಕೂಡ ಭಾರತದಲ್ಲಿ ಕೊವಿಡ್ ಪ್ರಮಾಣವನ್ನು ಪರಿಗಣಿಸಿ ತನ್ನ ರಾಷ್ಟ್ರದಿಂದ ವಿಮಾನ ಹಾರಾಟವನ್ನು ಮತ್ತೆ ವಿಳಂಬಗೊಳಿಸಿದೆ.

ಈ ಕುರಿತು ಸ್ಪಷ್ಟನೆ ನೀಡಿದ ಸೌದಿ ಗೃಹ ಸಚಿವಾಲಯ, ಕೊವಿಡ್ ಮತ್ತೆ ವ್ಯಾಪಿಸುವ ಸಾಧ್ಯತೆಯಿರುವುದರಿಂದ ಭಾರತಕ್ಕೆ ವಿಮಾನ ಹಾರಾಟ ಪ್ರಾಸ್ತಾಪವನ್ನು ಸದ್ಯ ಮುಂದೂಡಿದ್ದು, ಮುಂದಕ್ಕೆ ಈ ಕುರಿತು ತೀರ್ಮಾನಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದೆ.

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...