ಪುತ್ತೂರು ಪೋಲಿಸರನ್ನು ಅಭಿನಂದಿಸಿದ ವೆಲ್ಫೇರ್ ಪಾರ್ಟಿ


ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಇಲ್ಲಿನ ಮೊಟ್ಟೆತ್ತಡ್ಕದಲ್ಲಿ ಗಾಂಜಾ ಮಾರಾಟಗಾರರ ತಂಡವನ್ನು ತುಂಬಾ ಸಾಹಸದಿಂದ ಹಿಡಿದ ಪುತ್ತೂರು ನಗರ ಪೋಲಿಸ್ ವೃತ್ತ ಅಧೀಕ್ಷಕರಾದ ಗೋಪಾಲ್ ನಾಯ್ಕ್ ಮತ್ತು  ಪೋಲಿಸ್ ಉಪ ನಿರೀಕ್ಷಕರಾದ ಜಂಬೂ ರಾಜ್ ರವರ ನೇತೃತ್ವದ ಪೋಲಿಸ್ ತಂಡವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವತಿಯಿಂದ ಅಭಿನಂದಿಸಲಾಯಿತು.  ಡ್ರಗ್ಸ್ ಯುವ ಜನಾಂಗವನ್ನು ವಿನಾಶದೆಡೆಗೆ ತಳ್ಳುವ ಪಿಡುಗಾಗಿದೆ.ಜನರ ಅಪರಾಧಿ ಪ್ರವೃತ್ತಿಯ ಹಿಂದಿರುವ ಕಾರಣಗಳ ಪೈಕಿ ಡ್ರಗ್ಸ್ ಪ್ರಮುಖವಾಗಿದೆ. ಸಮಾಜದ ನೆಮ್ಮದಿಗೆ ಕಂಟಕವಾಗಿರುವ ಈ  ಹಾವಳಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪತ್ತೂರು ಪೋಲೀಸರ ನಿನ್ನೆಯ ಕಾರ್ಯಾಚರಣೆಯನ್ನು ಶ್ಲಾಘಿಸಿ ವೆಲ್ಫೇರ್ ಪರ್ಟಿ ಆಫ್ ಇಂಡಿಯಾ ಅಭಿನಂದಿಸಿದೆ.

ಪುತ್ತೂರು ಠಾಣಾ ಉಪನಿರೀಕ್ಷಕರಾದ ಜಂಬೂರಾಜ್ ಮಹಾಜನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 6 ಕೆಜಿಯಷ್ಟು ಗಾಂಜಾ ಮತ್ತು ಸೊತ್ತುಗಳನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೊಂದು ಅಭಿನಂದನೀಯ ಕಾರ್ಯಾಚರಣೆಯಾಗಿದೆ. 

ಈ ನಿಟ್ಟಿನಲ್ಲಿ ಪುತ್ತೂರು ಪೋಲೀಸರ ಕಾರ್ಯಾಚರಣೆ ಸಮಾಜಕ್ಕೆ ಭರವಸೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಡ್ರಗ್ಸ್ ಹಿಂದೆ ದೊಡ್ಡ ಜಾಲವೇ ಎಲ್ಲೆಡೆಯೂ ಕಾರ್ಯಾಚರಿಸುತ್ತಿದೆ. ನಿರ್ಜನ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಓಡಾಡಲು ಭಯಪಡುವ ವಾತಾವರಣವಿದೆ. ಆದ್ದರಿಂದ ಈ ಕಾರ್ಯಾಚರಣೆ ಇಷ್ಟಕ್ಕೆ ನಿಲ್ಲದೆ, ಡ್ರಗ್ಸಿನ ಜಾಲವನ್ನು ಭೇದಿಸಿ ಇದರ ಹಿಂದೆ ಇರುವ ಪ್ರಮುಖ ಅಪರಾಧಿಗಳನ್ನು ಮಟ್ಟಹಾಕಿ ಡ್ರಗ್ಸ್ ಹಾವಳಿಯಿಂದ ಸಮಾಜವನ್ನು ರಕ್ಷಿಸಬೇಕಾಗಿ ವೆಲ್ಫೇರ್ ಪಾರ್ಟಿ ಆಗ್ರಹಿಸುತ್ತದೆ. ಈ ಸಂಧರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯ ಸಮಿತಿ ಸದಸ್ಯ ಸುಲೈಮಾನ್ ಕಲ್ಲರ್ಪೆ,ಪುತ್ತೂರು ವಲಯ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ವಿಟ್ಲ, ಉಪ್ಪಿನಂಗಡಿ ಅಧ್ಯಕ್ಷರಾದ ಅನ್ವರ್ ಸಾದಾತ್, ಪಕ್ಷದ ಪುತ್ತೂರು ಕಾರ್ಯದರ್ಶಿ ತನ್ವೀರ್ ವಳತ್ತಡ್ಕ ಮತ್ತು ಪಕ್ಷದ  ಉಪ್ಪಿನಂಡಿ ಕಾರ್ಯದರ್ಶಿ ಅಲ್ತಾಫ್ ಹುಸೇನ್ ಉಪಸ್ಥಿತರಿದ್ದರು

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...