ಜೆದ್ದಾ(www.vknews.in): ಸೌದಿ ಅರೇಬಿಯಾದ ಹೆದ್ದಾರಿ ಸಂಖ್ಯೆ 10 ಭೂಮಿಯ ಮೇಲಿನ ಅತಿ ಉದ್ದದ ನೇರ ರಸ್ತೆಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಈ ರಸ್ತೆಯು 100 ಮೈಲುಗಳಷ್ಟು ವಿಸ್ತರಿಸಿದ್ದು, ಇದು ಹರಾದ್ ಅನ್ನು ಅಲ್ ಬಾಥಾಗೆ ಸಂಪರ್ಕಿಸುವ ರಸ್ತೆಯಾಗಿದೆ. ಈ ರಸ್ತೆಯ ಇಕ್ಕೆಲಗಳೂ ಮರುಭೂಮಿಯನ್ನು ಹೊರತುಪಡಿಸಿ ಬೇರೇನನ್ನೂ ಹೊಂದಿಲ್ಲ. ಭೂಮಿಯ ಮೇಲೆ ಅತ್ಯಂತ ನೀರಸ ಮತ್ತು ಜನವಸತಿಯಿಲ್ಲದ ರಸ್ತೆ ಇದಾಗಿದೆ.
ಹರಾದ್ನಿಂದ ಅಲ್ ಬತ್ತಾಗೆ ವ್ಯಾಪಿಸಿರುವ ಈ ಹೆದ್ದಾರಿ ಸುಮಾರು 256 ಕಿಲೋಮೀಟರ್ ವಿಸ್ತಾರವನ್ನು ಹೊಂದಿದ್ದು, ರಬ್ ಅಲ್-ಖಾಲಿ ಮರುಭೂಮಿಯ ಮೂಲಕ ಹಾದು ಹೋಗುತ್ತದೆ. ಸರಿಸುಮಾರು 146 ಕಿಲೋಮೀಟರ್ ನೇರ ರಸ್ತೆಯನ್ನು ಹೊಂದಿರುವ ಆಸ್ಟ್ರೇಲಿಯಾದ ಐರ್ ಹೆದ್ದಾರಿಯ ಈ ಹಿಂದಿನ ದಾಖಲೆಯನ್ನು ಹರಾದ್-ಬತ್ತಾ ಹೆದ್ದಾರಿಯು ಮುರಿದಿದೆೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.