(ವಿಶ್ವ ಕನ್ನಡಿಗ ನ್ಯೂಸ್)
ಹಲವಾರು ಯೋಜನೆಗಳೊಂದಿಗೆ ತಮ್ಮೆಲ್ಲರ ಸಹಕಾರದಿಂದ ಸುಮಾರು 4 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡ ವಧು ವರರಿಗೆ ಸೂಕ್ತ ವೈವಾಹಿಕ ಸಂಬಂಧವನ್ನು ಕಲ್ಪಿಸಿಕೊಡೂದಲ್ಲದೆ ಆರ್ಥಿಕವಾಗಿ ಅಶಕ್ತರಾದ ಕುಟುಂಬದ ವಿವಾಹ ಸಮಾರಂಭಕ್ಕೆ ಮದುವೆ ಉಡುಪುಗಳು ಹಾಗೂ ಇನ್ನಿತರ ಸಹಾಯ ನೀಡುತ್ತಾ ಬಂದಿದೆ. ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಅಂತರಾಷ್ಟ್ರೀಯ 2021-22 ನೇ ಸಾಲಿನ ನೂತನ ಸಮಿತಿಯು ಸ್ಥಾಪಕಾಧ್ಯಕ್ಷರಾದ ರಾಶ್ ಬ್ಯಾರಿ ಹಾಗೂ ಮಾಜಿ ಅಧ್ಯಕ್ಷರಾದ ಇಮ್ತಿಯಾಝ್ ಉಡುಪಿ ರವರ ನೇತೃತ್ವದಲ್ಲಿ ರಚನೆಯಾಯಿತು.
ತಂಡದ ಅಧ್ಯಕ್ಷರಾಗಿ : ಮಜೀದ್ ಬಹಸನಿ ಉಪಾಧ್ಯಕ್ಷರಾಗಿ : ಇರ್ಫಾನ್ ಕಲ್ಲಡ್ಕ ಪ್ರಧಾನ ಕಾರ್ಯದರ್ಶಿಯಾಗಿ : ಕಲಂದರ್ ರಝ್ವಿ ಬೆಜ್ಜವಳ್ಳಿ ಉಪಕಾರ್ಯದರ್ಶಿಯಾಗಿ: ಸುಹೈಲ್ ಕುತ್ತಾರು ಕೋಶಾಧಿಕಾರಿಯಾಗಿ : ಇಮ್ತಿಯಾಜ್ ಉಡುಪಿ ಸಹಾಯಕ ಕೋಶಾಧಿಕಾರಿಯಾಗಿ: ಅಶ್ಪಾಕ್ ಜೋಕಟ್ಟೆ ಸಂಘಟನಾ ಕಾರ್ಯದರ್ಶಿಯಾಗಿ : ನೌಶಾದ್ ಅಮ್ಮೆಂಬಲ ಮಾಹಿತಿ ಸಂಪರ್ಕ ಕಾರ್ಯದರ್ಶಿಯಾಗಿ : ಅಶ್ರಫ್ ಶಿರ್ವ ವಿಸ್ತರಣೆ ಕಾರ್ಯದರ್ಶಿಯಾಗಿ : ಆರೀಫ್ ಗೋಳಿತೊಟ್ಟು ಸಾಂತ್ವನ ವಿಭಾಗ ಕಾರ್ಯದರ್ಶಿಯಾಗಿ : ಮಜೀದ್ ಬಿಕರ್ನಕಟ್ಟೆ ಸಾಂತ್ವನ ವಿಭಾಗ ಉಪಕಾರ್ಯದರ್ಶಿಯಾಗಿ: ಶಫೀಕ್ ಉಳ್ಳಾಲ. ಮಾಧ್ಯಮ/ ಸಾಮಾಜಿಕ ತಾಣ ಕಾರ್ಯದರ್ಶಿ: ಫೌಸಿಲ್ ನೆಕ್ಕರೆ ಯವರನ್ನು ಆಯ್ಕೆ ಮಾಡಲಾಯಿತು .
ಬ್ಯಾರಿ ನಿಖಾಃ ಹೆಲ್ಪ್ ಲೈನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.