ಜೆದ್ದಾ(www.vknews.in): ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಗಾರನಾಗಿದ್ದ ಸೌದಿ ಪ್ರಜೆ ಜಮಾಲ್ ಖಶೋಗಿ ಹತ್ಯೆಯಲ್ಲಿ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಪಾತ್ರವಿದೆ ಎಂಬ ಯುನೈಟೆಡ್ ಸ್ಟೇಟ್ ಕಾಂಗ್ರೆಸ್ ಗೆ ಸಲ್ಲಿಸಿದ ವರದಿಯನ್ನು ಸೌದಿ ಅರೇಬಿಯಾವು ಸ್ಪಷ್ಟವಾಗಿ ತಿರಸ್ಕರಿಸಿದೆೆ.
ಇದು ನಕಾರಾತ್ಮಕ ಸುಳ್ಳು ವರದಿಯಾಗಿದ್ದು, ಸೌದಿ ನಾಯಕತ್ವವನ್ನು ಬಲಿಪಶು ಮಾಡುವ ತಂತ್ರವಾಗಿದೆ ಎಂದು ಸೌದಿ ಅರೇಬಿಯಾವು ಟೀಕಿಸಿದೆ.
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರ ತೀವ್ರ ಟೀಕಾಕಾರರಾಗಿದ್ದ ಖಶೋಗಿಯನ್ನು ಟರ್ಕಿಯ ಇಸ್ತಾಂಬುಲ್ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ 2018ರ ಅಕ್ಟೋಬರ್ 2ರಂದು ಹತ್ಯೆಗೈಯಲಾಗಿತ್ತು. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.