ಜೆದ್ದಾ(www.vknews.in): ಇರಾನ್ ಪ್ರೇರಿತ ಹೌತಿ ಬಂಡುಕೋರರು ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಸೌದಿ ಅರೇಬಿಯಾದ ನಾಲ್ಕು ಪ್ರಮುಖ ನಗರಗಳ ಮೇಲೆ ಏಳು ಡ್ರೋನ್ ದಾಳಿಯನ್ನು ನಡೆಸಿದ್ದು, ಎಲ್ಲಾ ಏಳು ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೇಬಿಯಾದ ಸೇನಾ ವಕ್ತಾರರು ತಿಳಿಸಿದ್ದಾರೆ.
ಸೌದಿ ಅರೇಬಿಯಾದ ಜೀಝಾನ್, ಅಭಾ ಹಾಗೂ ಕಮೀಶ್ ಮುಶಾಯತ್ ನಗರಗಳ ಮೇಲೆ ಹೌತಿಗಳು ಪದೇಪದೇ ಡ್ರೋನ್ ದಾಳಿ ನಡೆಸುತ್ತಿದ್ದರೂ, ರಾಜಧಾನಿಯಾದ ರಿಯಾದ್ ಮೇಲಿನ ನಿನ್ನೆಯ ದಾಳಿ ಜನತೆಯಲ್ಗಿ ದಿಗ್ಭ್ರಮೆ ಮೂಡಿಸಿದೆ. ನಿನ್ನೆ ರಿಯಾದ್ ಮೇಲಿನ ದಾಳಿಯ ವೇಳೆ ಭಾರಿ ಸ್ಪೋಟದ ಶಬ್ಧ ಕೇಳಿಬಂದಿದ್ದು, ಜನತೆಯಲ್ಲಿ ಭೀತಿಯನ್ನುಂಟು ಮಾಡಿದೆ. ಈ ದಾಳಿಯು ಹೌತಿ ಉಗ್ರರು ನಡೆಸಿದ್ದಾರೆಂದು ಸೌದಿ ಸೇನೆ ಹೇಳಿಕೊಂಡರೆ, ರಿಯಾದ್ ನಗರದ ಮೇಲೆ ತಾನು ಯಾವುದೇ ಡ್ರೋನ್ ದಾಳಿ ನಡೆಸಿಲ್ಲ ಎಂದು ಹೌತಿ ಬಂಡುಕೋರರು ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.