ಮಂಗಳೂರು(www.vknews.in): ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಿಂದಿ ಪರೀಕ್ಷೆಯಲ್ಲಿ ಮಂಗಳೂರು ಬಜಾಲ್ ಸಮೀಪದ ಪಕ್ಕಲಡ್ಕದ ಆಶಿಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಹೆತ್ತವರ ಮೂರು ಹೆಣ್ಣು ಮಕ್ಕಳಲ್ಲಿ ಹಿರಿಯವ ಳಾಗಿರುವ ರಿಕ್ಷಾ ಚಾಲಕ ಅಝೀಜ್ ಅವರ ಮಗಳು ಆಶಿಕ ಪ್ರಸ್ತುತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವ ಹಿಸುತ್ತಿರುತ್ತಾರೆ. ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಮಾಸ್ಟರ್ ಡಿಗ್ರಿ ಹಿಂದಿ ಯಲ್ಲಿ ಮೊದಲ ರ್ಯಾಂಕ್ ಪಡೆಯುವ ಮೂಲಕ ಅದ್ಯಾಪಕ ವೃಂದದ ಮತ್ತು ಸಹ ವಿದ್ಯಾರ್ಥಿಗಳ .ಹೆತ್ತವರ ಪ್ರಶಂಸಗೆ ಕಾರಣವಾಗಿದ್ದಾರೆ.
ಮುಂದಿನ ದಿನದಲ್ಲಿ ಪಿ ಎಚ್ ಡಿ ಮಾಡಲು ಆಸಕ್ತಿ ಹೊಂದಿರುವ ಇವರು ಸೂಕ್ತ ಪ್ರೋತ್ಸಾಹ ಸಿಕ್ಕಿದ್ದಲ್ಲಿ ಉನ್ನತ ಹುದ್ದೆ ಗೆ ಸೇರುವ ಬಯಕೆಯಲ್ಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.