ಜೆದ್ದಾ(www.vknews.in): ಕೊವಿಡ್ ಲಾಕ್ ಡೌನ್ ಕಾರಣದಿಂದಾಗಿ ಸರಿಸುಮಾರು ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡ ಅಂತರರಾಷ್ಟ್ರೀಯ ವಿಮಾನಯಾನವನ್ನು ಪ್ರಾರಂಭಿಸಲು ಸೌದಿ ಆಂತರಿಕ ಸಚಿವಾಲಯ ಹಾಗೂ ವಿಮಾನಯಾನ ಸಚಿವಾಲಯಗಳು ಸಿದ್ಧತೆಯನ್ನು ಪ್ರಾರಂಭಿಸಿದೆ. ಈ ಕುರಿತು ನಿನ್ನೆ ಆಂತರಿಕ ಸಚಿವಾಲಯವು ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳ ಸಭೆಯನ್ನು ಕರೆದಿದ್ದು, ಈ ಹಿಂದಿನ ಆದೇಶದ ಪ್ರಕಾರ ಮೇ 17 ರಿಂದ ಅಂತರರಾಷ್ಟ್ರೀಯ ವಿಮಾನಯಾನವನ್ನು ಪುನರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಭಾರತ ಸೇರಿದಂತೆ ದೈನಂದಿನ ಕೊವಿಡ್ ಪ್ರಕರಣಗಳು ವ್ಯಾಪಕವಾಗುತ್ತಿರುವ ದೇಶಗಳಿಂದ ಸೌದಿಗೆ ನೇರ ವಿಮಾನ ಸೇವೆಗಳ ಪುನರಾರಂಭವು ಅಸಂಭವವೆಂದೇ ಹೇಳಲಾಗುತ್ತಿದ್ದು, ಈ ದೇಶಗಳ ನಾಗರೀಕರು ಹತ್ತಿರದ ಗಲ್ಫ್ ರಾಷ್ಟ್ರಗಳಲ್ಲಿ 14 ದಿನಗಳ ಕ್ವಾರೆಂಟೈನ್ ಪೂರ್ತಿಗೊಳಿಸಿದ ನಂತರವೇ ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಅನುಮತಿಸುವ ಸಾಧ್ಯತೆ ನಿಚ್ಚಳವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.