ಜೆದ್ದಾ(www.vknews.in): ಕಟ್ಟುನಿಟ್ಟಿನ ನಿಯಮ ಪಾಲನೆಯೊಂದಿಗೆ ಸೌದಿಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ರಂಜಾನಿನ ತರಾವೀಹ್ ನಮಾಝ್ ಗೆ ಅವಕಾಶ ನೀಡಿ ಸೌದಿ ಸರಕಾರವು ನಿನ್ನೆ ತಡರಾತ್ರಿ ಆದೇಶ ಹೊರಡಿಸಿದೆ. ಈ ಹಿಂದೆ ತರಾವೀಹ್ ನಮಾಝ್ ಗೆ ಅವಕಾಶವಿಲ್ಲ ಎಂಬ ಸಚಿವಾಲಯದ ಆದೇಶದ ಒಂದು ದಿನದ ನಂತರ ಈ ಹೊಸ ಆದೇಶ ಹೊರಡಿಸಲಾಗಿದೆ.
ಎಲ್ಲಾ ಮಸೀದಿಗಳಲ್ಲಿ ಇಶಾ ನಮಾಝ್ ನಿರ್ವಹಿಸಿದ ತಕ್ಷಣ ತರಾವೀಹ್ ನಮಾಝ್ ಪ್ರಾರಂಭಿಸಲು ಆದೇಶಿಸಲಾಗಿದ್ದು, ತರಾವೀಹ್ 10 ರಕಾಅತ್ ಗಳಿಗೆ ಸೀಮಿತವಾಗಿರುತ್ತದೆ. ಇಶಾ ಹಾಗೂ ತರಾವೀಹ್ ನಮಾಝ್ ಪೂರ್ತಿಗೊಳಿಸಲು ಕೇವಲ 30 ನಿಮಿಷಗಳ ಸಮಯವನ್ನು ನೀಡಲಾಗಿದೆ. ಕೊವಿಡ್ ಪ್ರೊಟೊಕಾಲ್, ಸಾಮಾಜಿಕ ಅಂತರ ಹಾಗೂ ಸುರಕ್ಷಿತ ಕ್ರಮಗಳನ್ನು ಎಲ್ಲಾ ಮಸೀದಿಗಳು ಪಾಲಿಸಬೇಕಾಗಿದ್ದು, ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.