ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಒಮಾನಿನಾದ್ಯಂತ ಲಾಕ್ಡೌನ್ ಮೇ 8 ರಿಂದ 15 ರವರೆಗೆ ಒಂದು ವಾರ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಅದಲ್ಲದೇ ಈ ಹಿಂದೆ ಚಾಲ್ತಿಯಲ್ಲಿದ್ದ ಲಾಕ್’ಡೌನ್ ಸಮಯವನ್ನು ಬದಲಾಯಿಸಿ’ ಶನಿವಾರದಿಂದ ಸಂಜೆ 7ರಿಂದ ಬೆಳಿಗ್ಗೆ 4ರವರೆಗೆ ವಿಸ್ತರಿಸಲಾಗಿದೆ.
ಈ ಸಮಯದಲ್ಲಿ, ಆಹಾರ ಮಳಿಗೆಗಳು, ಪೆಟ್ರೋಲ್ ಪಂಪ್’ಗಳು, ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ದಿನವಿಡೀ ನಿಷೇಧಿಸಲಾಗುವುದು.
ಮೇಲೆ ತಿಳಿಸಲಾದ ನಿಷೇಧದ ಅವಧಿಯಲ್ಲಿ ಪಾರ್ಸಲ್ ಸರ್ವಿಸ್ ಸೇವೆಗಳನ್ನು ಅನುಮತಿಸಲಾಗುವುದು ಎಂದು ಸುಪ್ರೀಂ ಸಮಿತಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.