ದುಬೈ(www.vknews.in): ರೂಪಾಂತರ ಕೊವಿಡ್ ವ್ಯಾಪಕವಾಹುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರಿಗೆ ಯುಎಇ ವಿಧಿಸಿದ್ದ ಪ್ರಯಾಣ ನಿರ್ಬಂಧವನ್ನು ಅನಿರ್ದಿಷ್ಟವಧಿಗೆ ಮತ್ತೆ ವಿಸ್ತರಿಸಿದೆ. ಈ ಮೊದಲು 14 ದಿನಗಳಿಗೆ ಹೇರಿದ್ದ ನಿರ್ಬಂಧವನ್ನು ವಿಸ್ತರಿಸಿದ ಯುಎಇ ಈ ನಿರ್ಬಂಧ ಯಾವಾಗ ಅಂತ್ಯಗೊಳ್ಳಲಿದೆ ಎಂಬುವುದನ್ನು ಸ್ಪಷ್ಟಪಡಿಸಲಿಲ್ಲ. ಭಾರತೀಯ ಪ್ರಜೆಗಳಿಗೆ ಮತ್ತು ಭಾರತದಲ್ಲಿ 14 ದಿನಗಳ ಕಾಲ ವಾಸ್ತವವಿದ್ದು ಯುಎಇಗೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಈ ನಿಷೇಧ ಅನ್ವಯವಾಗಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.