ಜೆದ್ದಾ(www.vknews.in): ಮೇ 17 ರಿಂದ ಎಲ್ಲಾ ಅಂತರರಾಷ್ಟ್ರೀಯ ಮಾರ್ಗಗಳನ್ನು ತೆರೆಯುವುದಾಗಿ ಸೌದಿ ಆಂತರಿಕ ಸಚಿವಾಯಲವು ಘೋಷಿಸಿದ ಕೆಲವೇ ದಿನಗಳ ನಂತರ ಸೌದಿ ಅರೇಬಿಯನ್ ಏರ್ಲೈನ್ಸ್ ಭಾರತ ಸೇರಿದಂತೆ 38 ರಾಷ್ಟ್ರಗಳಿಗೆ ಪ್ರಯಾಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆದರೆ ಈ ಪ್ರಯಾಣ ಮಾರ್ಗಸೂಚಿಯು ಆಯಾ ದೇಶಗಳ ಪ್ರಯಾಣದ ಅರ್ಹತೆಯ ಮೇಲೆ ಅವಲಂಭಿತವಾಗಿರುತ್ತದೆ ಎಂದು ಹೇಳಿದೆ. ಈ ಮಾರ್ಗಸೂಚಿಗಳು ಯಾವುದೇ ಪೂರ್ವಸೂಚನೆಗಳಿಲ್ಲದೆ ಬದಲಾವಣೆಯಾಗುವ ಸಾಧ್ಯತೆಗಳಿದೆ ಎಂದೂ ವೆಬ್ ಸೈಟಿನಲ್ಲಿ ಹೇಳಲಾಗಿದೆ.
ಸೌದಿ ಏರ್ಲೈನ್ಸ್ ಮಾರ್ಗಸೂಚಿ ಪ್ರಕಟಿಸಿದ ರಾಷ್ಟ್ರಗಳಲ್ಲಿ ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಕುವೈತ್, ಭಾರತ, ಇಂಡೋನೇಷ್ಯಾ, ಪಾಕಿಸ್ತಾನ, ಫಿಲಿಪೈನ್ಸ್, ಮಲೇಷ್ಯಾ, ಮೊರಾಕೊ, ಸ್ಪೇನ್, ಇರಾಕ್, ಇಥಿಯೋಪಿಯಾ, ಮಾಲ್ಡೀವ್ಸ್, ಚೀನಾ, ಸ್ವಿಟ್ಜರ್ಲೆಂಡ್, ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್, ಇಟಲಿ, ಆಸ್ಟ್ರಿಯಾ, ಬಾಂಗ್ಲಾದೇಶ, ಗ್ರೀಸ್, ಜೋರ್ಡಾನ್, ಕೀನ್ಯಾ, ಟರ್ಕಿ, ಜರ್ಮನಿ, ಬಹ್ರೇನ್, ಲೆಬನಾನ್, ನೆದರ್ಲ್ಯಾಂಡ್ಸ್, ಕತಾರ್, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಸುಡಾನ್, ನೈಜೀರಿಯಾ, ಟುನೀಶಿಯಾ, ಓಮನ್ ಮತ್ತು ಮಾರಿಷಸ್ ಸೇರಿದೆ.
ಅಂತರರಾಷ್ಟ್ರೀಯ ಪ್ರಯಾಣಿಕರು ಎರಡು ಡೋಸ್ ಕೊವಿಡ್ ಲಸಿಕೆಯನ್ನು ಪಡೆದಿರಬೇಕು ಅಥವಾ ಒಂದು ಡೋಸ್ ಲಸಿಕೆ ಪಡೆದು 14 ದಿವಸಗಳು ಪೂರ್ಣಗೊಂಡಿರಬೇಕು, ಪ್ರಯಾಣಿಕನು ಕೊವಿಡ್ ಸೋಂಕಿಗೆ ಒಳಗಾಗಿದ್ದರೆ ಗುಣಮುಖನಾಗಿ 6 ತಿಂಗಳು ಪೂರ್ಣಗೊಂಡಿರಬೇಕು ಹಾಗೂ ಇವುಗಳನ್ನು ತವಕ್ಕಲ್ನಾದಲ್ಲಿ ಅಪ್ಡೇಟ್ ಮಾಡಿರಬೇಕು. 18 ವರ್ಷ ವಯಸ್ಸಿನೊಳಗಿನವರು ಪ್ರಯಾಣಿಸುವುದಾದರೆ ಸರಕಾರದ ಆರೋಗ್ಯ ವಿಮೆಯನ್ನು ಪಡಿೆದಿರಬೇಕು. ಸೌದಿ ಪ್ರವೇಶಿದವರು ಏಳು ದಿನಗಳ ಹೋಂ ಕ್ವಾರೆಂಟೈನ್ ಗೆ ಒಳಗಾಗಬೇಕು ತದನಂತರ ಕೊವಿಡ್ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಎಂಬ ನಿಯಮಗಳನ್ನು ಸೌದಿ ಆಂತರಿಕ ಸಚಿವಾಯವು ಈ ಹಿಂದೆ ಪ್ರಕಟಿಸಿತ್ತು.
ಭಾರತದಲ್ಲಿ ಕೊವಿಡ್ ಪರಿಸ್ಥಿತಿ ಕೈಮೀರಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳು ಭಾರತೀಯರ ಪ್ರವೇಶಕ್ಕೆ ನಿಷೇಧ ಹೇರಿದ್ದು, ಈ ಸನ್ನಿವೇಶದಲ್ಲಿ ಭಾರತೀಯರಿಗೆ ಸೌದಿ ಪ್ಸವೇಶ ಅನುಮತಿಸುವ ಸೌದಿ ಆಂತರಿಕ ಸಚಿವಾಲಯದ ತೀರ್ಮಾನದ ಕುರಿತು ಭಾರತೀಯರು ಕಾದು ನೋಡಬೇಕಿದೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.