Mr Basavaraj Helwar,Indian Divyang Empowerment Association.
(www.vknews.in) ಕಲಬುರಗಿ: ಅಂಗವಿಕಲರ ಅನುಕೂಲಕ್ಕಾಗಿ ಜೂನ್ 1, 2021 ರಿಂದ ಯು.ಡಿ.ಐ.ಡಿ ಪೋರ್ಟಲ್ www.swavlambancard.gov.in ಮೂಲಕ ದಿವ್ಯಾಂಗರಿಗೆ ಆನಲೈನ್ ಮೂಲಕ ಅಂಗವಿಕಲರ ಪ್ರಮಾಣಪತ್ರ ವಿತರಣೆ ಕಡ್ಡಾಯಗೊಳಿಸಿ ಭಾರತ ಸರ್ಕಾರದ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆ (DEPwD) ಇತ್ತೀಚೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ದಿವ್ಯಾಂಗರ ಪ್ರಯೋಜನಕ್ಕಾಗಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಅಂಗವಿಕಲರ ಪ್ರಮಾಣಪತ್ರ ವಿತರಣೆ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿದೆ.
ವಿಶೇಷವಾಗಿ ಕಲ್ಯಾಣ ಕರ್ನಾಟಕ ಗ್ರಾಮೀಣ ಭಾಗದ ಎಲ್ಲಾ ವಿಶೇಷಚೇತನರು ತಪ್ಪದೆ ಆನ್ಲೈನ್ ಮೂಲಕ ಅಂಗವೈಕಲ್ಯ ಪ್ರಮಾಣಪತ್ರಕ್ಕೆ ಕೂಡಲೇ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕು. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಬಹಳ ಅನುಕೂಲವಾಗುತ್ತದೆ ಎಂದು ರಾಷ್ಟ್ರೀಯ ಅಂಗವಿಕಲರ ಸಭಲೀಕರಣ ಸಂಸ್ಥೆ ನಿರ್ದೇಶಕ ಹಾಗು ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ತಿಳಿಸಿದ್ದಾರೆ.
ಆನ್ಲೈನ್ ಮೂಲಕ ಅಂಗವಿಕಲರ ಪ್ರಮಾಣ ಪತ್ರ ಅರ್ಜಿ ಸಲ್ಲಿಸಲು ಈ ಲಿಂಕ್ ಒತ್ತಿರಿ: http://www.swavlambancard.gov.in/home/login
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.