ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಎರಡು ದಿನಗಳ ಹಿಂದೆ ಬಿಡುಗಡೆ ಗೊಂಡ ಧರ್ಮ ದೈವ ಕಿರು ಚಿತ್ರ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನಿತಿನ್ ರೈ ಕುಕ್ಕುವಳ್ಳಿ ಕಥೆ ಮತ್ತು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಸೋನು ಕ್ರಿಯೆಶನ್ಸ್ ಅಡಿಯಲ್ಲಿ ಸುಧಾಕರ್ ಪಡೀಲ್ ನಿರ್ಮಿಸಿದ್ದಾರೆ.. ಹಮೀದ್ ಪುತ್ತೂರು ಚಿತ್ರಕಥೆ ಬರೆದಿದ್ದು, ರಾಧೆಶ್ ರೈ ಮೋಡಪ್ಪಾಡಿ ಸಂಗೀತ ಮತ್ತು ಸಂಕಲನ ಮಾಡಿದ್ದಾರೆ. ಛಾಯಾಗ್ರಾಹಕ ಹರೀಶ್ ಪುತ್ತೂರು ಹೊಸಬಗೆಯ ಪ್ರಯತ್ನ ಯಶಸ್ವಿಯಾಗಿದೆ. ಸ್ಥಿರ ಚಿತ್ರ ಪ್ರಣವ ಭಟ್ ಮತ್ತು ಗ್ರಾಫಿಕ್ಸ್ ಕೆಲಸವನ್ನು ಧನು ರೈ ಮತ್ತು ನಿತಿನ್ ಕನಾವು ಮಾಡಿದ್ದಾರೆ.
ಪ್ರೇಮ್ ಅರ್ಲಪದವು ಅವರ ಮೇಕ್ ಅಪ್ ಕೆಲಸ ಈ ಚಿತ್ರದಲ್ಲಿ ಎದ್ದು ಕಾಣುತ್ತಿದ್ದೂ, ಭಾಸ್ಕರ್ ರೈ ಕುಕ್ಕುವಳ್ಳಿ ಮತ್ತು ಅಶ್ವಿನಿ ಪೆರುವಾಯಿ ಅವರ ಹಿನ್ನೆಲೆ ಧ್ವನಿ ಮತ್ತಷ್ಟು ಮೆರಗು ನೀಡಿದೆ. ಸಂಭಾಷಣೆ ಕೆಲಸವನ್ನು ನಾರಾಯಣ ರೈ ಕುಕ್ಕುವಳ್ಳಿ ಮತ್ತು ಹಮೀದ್ ಸೊಗಸಾಗಿ ನಿರ್ವಹಿಸಿದ್ದಾರೆ. ನಿರ್ಮಾಣ ನಿರ್ವಹಣೆಯಲ್ಲಿ ಕೌಶಿಕ್ ರೈ ಕುಂಜಾಡಿ ಮತ್ತು ನಿತೇಶ್ ಕೆಲಸ ಮಾಡಿದ್ದಾರೆ.
ಕಲಾವಿದರದ ರಮೇಶ್ ರೈ ಕುಕ್ಕುವಳ್ಳಿ ಪಾತ್ರಕ್ಕೆ ಜೀವ ನೀಡಿದ್ದು ಸಹ ಕಲಾವಿದರದ ಸುಂದರ್ ರೈ ಮಂದಾರ, ದೀಕ್ಷಾ ಡಿ ರೈ, ಚಿತ್ತರಂಜನ್ ಶೆಟ್ಟಿ ನುಳಿಯಲು, ವಸಂತ ಲಕ್ಷ್ಮಿ ಪುತ್ತೂರು ಸೊಗಸಾಗಿ ನಟಿಸಿದ್ದಾರೆ. Talkies youtub ನಲ್ಲಿ ಇದು ಪ್ರಸಾರಗೊಳ್ಳುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.