ದುಬೈ (www.vknews.com) : ದಿನಾಂಕ 15.07.2021 ರಂದು Team501 ಆಯೋಜಿಸಿದ ಕ್ರಿಕೆಟ್ ಪಂದ್ಯಾಟವು ಇಲ್ಲಿನ ಸ್ಕೌಟ್ ಮಿಷನ್ ಗ್ರೌಂಡ್ ಅಬು ಹೈಲ್ ದುಬೈ ಯಲ್ಲಿ ನೆರವೇರಿತು.
ಈ ಕ್ರಿಕೆಟ್ ಪಂದ್ಯಾಟದುದ್ದಕ್ಕೂ ಉತ್ತಮ ನಿರ್ವಹಣೆ ಪ್ರದರ್ಶಿಸಿದ D ಗ್ರೂಪ್ ವಿಟ್ಲ A ತಂಡವು ಅರ್ಹವಾಗಿ ವಿಜಯಪಾತಕೆ ಹಾರಿಸಿ ಪ್ರಥಮ ಬಹುಮಾನದ ನಗದು ಮತ್ತು ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ದ್ವಿತೀಯ ಬಹುಮಾನದ ನಗದು ಮತ್ತು ಟ್ರೋಫಿಯನ್ನು ಉಬಾರ್ ಫ್ರೆಂಡ್ಸ್ ತಂಡವು ತನ್ನದಾಗಿಸಿಕೊಂಡಿತು.
ತೃತೀಯ ಬಹುಮಾನವನ್ನು D ಗ್ರೂಪ್ ವಿಟ್ಲ B ತಂಡ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿ ಮಂಗಳೂರು ಫ್ರೆಂಡ್ಸ್ ತಂಡವು ತೃಪ್ತಿಪಟ್ಟಿತು.
ಪಂದ್ಯಾಕೂಟದ ಉದ್ದಕ್ಕೂ ಉತ್ತಮ ಆಟವನ್ನು ಪ್ರದರ್ಶಿಸಿದ D ಗ್ರೂಪ್ ತಂಡದ ಮುನೀರ್ ಕಂಡಿಗರವರಿಗೆ ಸರಣಿ ಶ್ರೇಷ್ಠ ಹಾಗೂ ಉತ್ತಮ ಬ್ಯಾಟ್ಸಮನ್ ಆಗಿ ಉಬಾರ್ ಫ್ರೆಂಡ್ಸ್ ತಂಡದ ಶಾಹಿನ್ ಉತ್ತಮ ಬೌಲರ್ ಆಗಿ ಆಸ್ವಾರ್ ಕೊಯಿಲ ಮತ್ತು ಫೈನಲ್ ಪಂದ್ಯದಲ್ಲಿ ಪಂದ್ಯಾಶ್ರೇಷ್ಠ ಪ್ರಶಸ್ತಿಯನ್ನು ಮುಆಝ್ ಪಡಕೊಂಡರು.
ಈ ಪಂದ್ಯಾಕೂಟದ ಪ್ರಾಯೋಜಕರಾಗಿ ಸ್ಮಾರ್ಟ್ ರೂಟ್ ಟೆಕ್ನಾಲಜಿಸ್ ಮಂಗಳೂರು, ಸ್ಟಾರ್ ಕಿಲ್ಲರ್ ಮೆನ್ಸ್ ಫ್ಯಾಷನ್ ದುಬೈ, ಅಲ್ ಹಿಬಾತ್ ರೋಸ್ಟರಿ ದುಬೈ, ನಜಮ್ ಅಲ್ ಶಹಾಮ ಗ್ಯಾರೇಜ್ ಶಾರ್ಜಾ, ಮತ್ತು ವಾಸಿತ್ ಸ್ಪೋರ್ಟ್ಸ್ ಶಾರ್ಜಾ ಸಹಕಾರ ನೀಡಿತು.
ಸಮಾರೋಪ ಸಮಾರಂಭದಲ್ಲಿ, ಮೊಹಮದ್ ನವಾಜ್ (DIB BANK ), ಅಬ್ದುಲ್ಲಾಹ್ (ಸ್ಮಾರ್ಟ್ ರೂಟ್ ಟೆಕ್ನಾಲಜಿಸ್ ), ಆಸೀಫ್ (ಸ್ಟಾರ್ ಕಿಲ್ಲರ್ ಮೆನ್ಸ್ ಫ್ಯಾಷನ್ಸ್ )ಅಲ್ ಹಿಬಾತ್ ನ ಝುಬೆರ್, ಪಂದ್ಯಕೂಟದ ವ್ಯವಸ್ಥಾಪಕರಾಗಿದ್ದ ಫಾರೂಕ್ ವಗ್ಗ, ಝಮೀರ್ ಸಜಿಪ ಮತ್ತು ಜೋಯಲ್ ಮಡಂತ್ಯಾರ್ ಉಪಸ್ಥಿತರಿದ್ದರು. ಕಮೆಂಟಾಟರ್ ಆಗಿ ಆಸಾದುಲ್ಲಾ ಮತ್ತು ಅಶ್ರಫ್ ಪೆರುವಾಯಿ ನೆರವೇರಿಸಿದರು. ಕೊನೆಯಲ್ಲಿ Team501ನ ರಿಜ್ವಾನ್ ರವರು ಎಲ್ಲರಿಗೂ ಧನ್ಯವಾದವಿತ್ತರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.