ಕೆನರಾ ಬ್ಯಾಂಕ್ ರುಡ್ಸೆಟ್ ತರಬೇತಿ ಕೇಂದ್ರದ ಒಂದು ನೋಟ.
(ವಿಶ್ವಕನ್ನಡಿಗ ನ್ಯೂಸ್), ಮಣಿಪಾಲ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RUDSET) ಮಣಿಪಾಲ ಇವರ ವತಿಯಿಂದ ನಿರುದ್ಯೋಗಿ ಸ್ವಉದ್ಯೋಗಾಕಾಂಕ್ಷಿಗಳಿಗಾಗಿ 02/08/2021 ರಿಂದ 30 ದಿನಗಳ “ಬ್ಯೂಟಿಪಾರ್ಲರ್ ಮ್ಯಾನೇಜ್ಮೆಂಟ್ ಮತ್ತು 05/08/2021 ರಿಂದ 30 ದಿನಗಳ “ಮಹಿಳೆಯರ ಟೈಲರಿಂಗ್” ಕುರಿತಾದ ಉಚಿತ ತರಬೇತಿಯನ್ನು ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಊಟ – ವಸತಿ ಸಂಪೂರ್ಣವಾಗಿ ಉಚಿತವಾಗಿದ್ದು; ಸಂಬಂಧಿಸಿದ ಕ್ಷೇತ್ರದ ಬಗ್ಗೆ ಪ್ರಯೋಗಿಕವಾಗಿ ತಿಳಿಸುವುದರ ಜೊತೆಗೆ ಉದ್ಯಮಶೀಲತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುತ್ತದೆ.
ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೆಲೆಸಿರುವ 18 ರಿಂದ 45 ರೊಳಗಿನ ವಯೋಮಾನದ ನಿರುದ್ಯೋಗಿ ಯುವತಿಯರು ಈ ತರಬೇತಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೇ ತಮ್ಮ ಹೆಸರು, ಪೂರ್ಣವಿಳಾಸ, ಪಿನ್ ಕೋಡ್, ಸಂಪರ್ಕಕ್ಕೆ ಲಭ್ಯವಿರುವ ದೂರವಾಣಿ ಸಂಖ್ಯೆ, ವಯಸ್ಸು, ವಿದ್ಯಾರ್ಹತೆ, ಪಡೆಯಲಿಚ್ಚಿಸಿರುವ ತರಬೇತಿಯ ಹೆಸರು, ಮುಂತಾದ ಮಾಹಿತಿಯೊಂದಿಗೆ ಖಾಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ದಿನಾಂಕ 30.07.2021 ರೊಳಗೆ ಈ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಿಕೊಡಲು ಕೋರಲಾಗಿದೆ. ಒಬ್ಬ ಅಭ್ಯರ್ಥಿಗೆ ಒಂದು ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ. ಆಸಕ್ತ ಕ್ಷೇತ್ರಕ್ಕೆ ಅರ್ಜಿಯನ್ನು ಕಳುಹಿಸಬೇಕಾಗಿ ವಿನಂತಿ. ದೂರವಾಣಿ ಮುಖಾಂತರವೂ ತರಬೇತಿಗೆ ನೋದಾಯಿಸಿಕೊಳ್ಳಬಹುದು. ಗ್ರ್ರಾಮೀಣ ಪ್ರದೇಶದ ಬಿ.ಪಿ.ಎಲ್ ಕುಟುಂಬದ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.
ಸಂಸ್ಥೆಯ ದೂರವಾಣಿ ಸಂಖ್ಯೆ: 0820-2570455, 9449862665 ವಿಳಾಸ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, (RUDSET) ಕೆನರಾ ಬ್ಯಾಂಕ್ ಪ್ರ್ರಧಾನ ಕಛೇರಿ (ಅನೆಕ್ಸ್) ಸಂಕೀರ್ಣ, ಮಣಿಪಾಲ – 576104
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.