ಇಸ್ರೇಲಿ ಕ್ರೀಡಾಪಟುವನ್ನು ಎದುರಿಸುವುದನ್ನು ತಪ್ಪಿಸಲು ಅಲ್ಜೀರಿಯಾದ ಅಥ್ಲೀಟ್ ಫೆಥಿ ನೌರಿನ್ ಮತ್ತು ಅವರ ತರಬೇತುದಾರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಜೂಡೋ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದು ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ ಜುಲೈ 24 ರಂದು ದೃಢ ಪಡಿಸಿತು. ಅಲಿಜೀರಿಯನ್ ಜುಡೋ ಪಟು ನುರಿನ್ ಮತ್ತು ತರಬೇತುದಾರ ಅಮರ್ ಬೆನಿಖ್ಲೆಫ್ “ಈ ಸಂದರ್ಭದಲ್ಲಿ ಇಸ್ರೇಲಿ ಕ್ರೀಡಾಪಟುವನ್ನು ಭೇಟಿಯಾಗುವುದನ್ನು ತಪ್ಪಿಸಲು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಮಾಧ್ಯಮಗಳಿಗೆ ವೈಯಕ್ತಿಕ ಹೇಳಿಕೆಗಳನ್ನು ನೀಡಿದರು”. “ನಾವು ಒಲಿಂಪಿಕ್ಸ್ ತಲುಪಲು ಸಾಕಷ್ಟು ಶ್ರಮಿಸಿದ್ದೇವೆ, ಆದರೆ ಪ್ಯಾಲೇಸ್ಟಿನಿಯನ್ ಶ್ಮವು ಈ ಎಲ್ಲಕ್ಕಿಂತ ದೊಡ್ಡದಾಗಿದೆ” ಎಂದು 30 ವರ್ಷದ ನೂರಿನ್ ಅಲ್ಜೀರಿಯಾದ ದೂರದರ್ಶನಕ್ಕೆ ತಿಳಿಸಿದರು. ಅವರ ಹೇಳಿಕೆಗಳನ್ನು ಬೆನಿಖ್ಲೆಫ್ ಬೆಂಬಲಿಸಿದರು, ಅವರು “ಡ್ರಾದಲ್ಲಿ ಅದೃಷ್ಟಶಾಲಿಯಾಗಿಲ್ಲ ಎಂದು ಒಪ್ಪಿಕೊಂಡರು, ನಮಗೆ ಇಸ್ರೇಲಿ ಎದುರಾಳಿ ಸಿಕ್ಕಿತು ಮತ್ತು ಅದಕ್ಕಾಗಿಯೇ ನಾವು ನಿವೃತ್ತಿ ಹೊಂದಬೇಕಾಯಿತು. ನಾವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಒಪ್ಪಿಕೊಂಡರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.