ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ತಾತ್ಕಾಲಿಕವಾಗಿ ಕೋವಿಡ್ ಕಾರಣದಿಂದ ನಿಲ್ಲಿಸಿದ, ಎಲ್ಲಾ ರೀತಿಯ ವೀಸಾಗಳನ್ನು ನೀಡಲು ಸೆಪ್ಟೆಂಬರ್ 1 ರಿಂದ ಆರಂಭಿಸಲಿದೆ ಎಂದು ರಾಯಲ್ ಓಮನ್ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾದ್ಯಮದಿಂದ ತಿಳಿಯಲಾಗಿದೆ.
ಸುಪ್ರೀಂ ಕಮಿಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಜರ್ ಜನರಲ್ ಅಬ್ದುಲ್ಲಾ ಅಲ್ ಹರ್ತಿಯವರು 2021 ರ ಆರಂಭದಿಂದ ನೀಡಲಾದ ವೀಸಾಗಳನ್ನು ಯಾವುದೇ ಶುಲ್ಕವಿಲ್ಲದೆ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗುವುದು ಎಂದು ಹೇಳಿದರು. “ಸುಲ್ತಾನರ ಹೊರಗಿರುವ ಯಾರಾದರೂ ROP ವೆಬ್ಸೈಟ್ಗೆ ಪ್ರವೇಶಿಸಬಹುದು ಮತ್ತು ಈ ವೀಸಾಗಳನ್ನು ವಿಸ್ತರಿಸಲಾಗಿದೆ ಎಂದು ಕಂಡುಕೊಳ್ಳಬಹುದು” ಎಂದು ಅಲ್ ಹರ್ತಿ ಹೇಳಿದರು.
ಏತನ್ಮಧ್ಯೆ, ಆರು ತಿಂಗಳಿಗಿಂತ ಹೆಚ್ಚು ಕಾಲ ವಿದೇಶದಲ್ಲಿ ಸಿಲುಕಿರುವ ವಲಸಿಗರು ತಮ್ಮ ಉದ್ಯೋಗದಾತರ ಕೋರಿಕೆಯ ಮೇರೆಗೆ ತಮ್ಮ ಸ್ಥಿತಿಯನ್ನು ನವೀಕರಿಸಿದ ನಂತರ ಮರಳಬಹುದು. ಮಾನ್ಯ ವೀಸಾ ಹೊಂದಿರುವ, ಆದರೆ 6 ತಿಂಗಳಿಗಿಂತ ಹೆಚ್ಚು ಕಾಲ ಒಮಾನಿಂದ ಹೊರಗಿರುವ ವಲಸಿಗ ಕಾರ್ಮಿಕರು ಉದ್ಯೋಗದಾತರ (ಪ್ರಾಯೋಜಕರ) ಕೋರಿಕೆಯ ಮೇರೆಗೆ ತಮ್ಮ ವೀಸಾ ಸ್ಥಿತಿಯನ್ನು ನವೀಕರಿಸಬಹುದು ಎಂದು ಅಲ್ ಹರ್ತಿ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.