ಜೆದ್ದಾ(www.vknews.in): ಸೌದಿ ಶುರಾ ಕೌನ್ಸಿಲ್ ದೇಶದಲ್ಲಿರುವ ವಿದೇಶಿ ಕಾರ್ಮಿಕರ ಮೇಲೆ ಕಡ್ಡಾಯವಾಗಿ ವಿಧಿಸುವ ಲೆವಿ ವ್ಯವಸ್ಥೆಯನ್ನು ಪುನರ್ ಪರಿಶೀಲಿಸಲು ಕರೆ ನೀಡಿದೆ.
ಕೆಲವು ಶೂರ ಸದಸ್ಯರು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಕಡ್ಡಾಯ ತೆರಿಗೆ ವಿಧಿಸುವ ಮೂಲಕ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರೆ,.ಕೆಲವು ಶೂರ ಸದಸ್ಯರು ಲೆವಿಯನ್ನು ಸಂಪೂರ್ಣವಾಗಿ ಹಿಂಪಡೆಯದಿದ್ದರೂ ಈಗಿರುವ ಲೆವಿ ಪದ್ಧತಿಯನ್ನು ಬದಲಾಯಿಸುವಂತೆ ಕರೆ ನೀಡಿದ್ದಾರೆ.
ಮುಂದಿನ ಐದು ವರ್ಷಗಳವರೆಗೆ ಸಣ್ಣ ಸಂಸ್ಥೆಗಳಿಗೆ ಮರುಪಾವತಿ ಶುಲ್ಕವನ್ನು ಸರ್ಕಾರ ಪರಿಗಣಿಸಬೇಕು ಎಂದು ಶೂರಾ ಸದಸ್ಯರು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ ಲೆವಿ ಅನೇಕ ಸಣ್ಣ ಸಂಸ್ಥೆಗಳ ಸ್ಥಾನ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರಿದೆ ಎನ್ನುವುದು ಶೂರಾ ಕೌನ್ಸಿಲ್ ಅಭಿಪ್ರಾಯವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.