ಕೊಚ್ಚಿ (ವಿಶ್ವ ಕನ್ನಡಿಗ ನ್ಯೂಸ್) : ಮಮ್ಮುಟ್ಟಿ, ಮೋಹಲಾಲ್, ಟೋವಿನೋ ಬಳಿಕ ಪ್ರಿಥ್ವಿರಾಜ್ ಗೆ ದುಬೈ ಗೋಲ್ಡನ್ ವೀಸಾ ಒಲಿದಿದೆ. ನಟ ಪ್ರಿಥ್ವಿರಾಜ್ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಈ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಈ ಮೊದಲು ಗೋಲ್ಡನ್ ವೀಸಾ ಪಡೆಯುವ ಮೂಲಕ ಮಲಯಾಳಂ ಸ್ಟಾರ್ ನಟರಾದ ಮೋಹಲಾಲ್ ಮತ್ತು ಮಮ್ಮೂಟ್ಟಿ ಗೋಲ್ಡನ್ ವೀಸಾ ಪಡೆದ ಮಲಯಾಳಂ ಚಿತ್ರರಂಗದ ಪ್ರಥಮ ನಟರು ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಳಿಕ ಟೋವಿನೋ ಅವರೂ ಕೂಡ ಗೋಲ್ಡನ್ ವೀಸಾ ಪಡೆದಿದ್ದರು.
ಇದೀಗ ಗೋಲ್ಡನ್ ವೀಸಾ ಪಡೆದ ಪ್ರಿಥ್ವಿರಾಜ್, ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಇವರಿಗೆ ದನ್ಯವಾದ ಹೇಳಿ, ಟ್ವಿಟ್ಟರ್ ಮೂಲಕ ಅಭಿಮಾನಿಗಳ ಜೊತೆ ಸಂತಸವನ್ನು ಹಂಚಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.