ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಸೆಪ್ಟೆಂಬರ್ 14 ರಂದು ಬಿಡುಗಡೆಯಾದ ಹೊಸ ಐಫೋನ್ 13 ನಾಲ್ಕು ವಿಭಿನ್ನ ಮಾದರಿಗಳಲ್ಲಿ ಬರುತ್ತದೆ. ಭಾರತದಲ್ಲಿ ಐಫೋನ್ 13 64GB 69,900 ರೂಗಳಲ್ಲಿ ಹಾಗು 128GB ರೂ 79,900 ರಿಂದ ಪ್ರಾರಂಭವಾಗುತ್ತದೆ. 256GB ಮತ್ತು 512GB ಮಾದರಿಗಳ ಬೆಲೆ ಕ್ರಮವಾಗಿ ರೂ 89,900 ಮತ್ತು ರೂ 1,09,900 ಆಗಿರುತ್ತದೆ, ಮತ್ತು ಇದು ಐದು ಬಣ್ಣಗಳಲ್ಲಿ ಬರುತ್ತದೆ. ಐಫೋನ್ 13 ಸೆಪ್ಟೆಂಬರ್ 24 ರಿಂದ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಐಫೋನ್ 13 ಬಿಡುಗಡೆ ಬಳಿಕ ಐಫೋನ್ 12 ಬೆಲೆಯಲ್ಲಿ ಕಡಿಮೆಯಾಗಿದ್ದು, ಐಫೋನ್ 12 64 GB 65,900 ರಿಂದ ಅರಂಭವಾಗಿದೆ. ಅಲ್ಲದೇ ರೂ. 70,900 ಮತ್ತು ರೂ .80,900 ಬೆಲೆಯಲ್ಲಿ 128GB ಮತ್ತು 256GB ಆಯ್ಕೆಗಳಲ್ಲಿ ಲಭ್ಯವಿದೆ.
– ಹುಸೈನ್ ಶಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.